ಭಾರತ, ಏಪ್ರಿಲ್ 4 -- Waqf Bill Debate: ಲೋಕಸಭೆಯಲ್ಲಿ ಸುದೀರ್ಘ ಚರ್ಚೆಯ ಬಳಿಕ ಅಂಗೀಕಾರವಾಗಿದ್ದ ವಕ್ಫ್ ತಿದ್ದುಪಡಿ ಮಸೂದೆ ನಿನ್ನೆ (ಏಪ್ರಿಲ್ 3) ರಾಜ್ಯಸಭೆಯಲ್ಲಿ ಚರ್ಚೆಗೆ ಒಳಗಾಯಿತು. ಈ ಕಲಾಪ ಇಂದು (ಏಪ್ರಿಲ್ 4) ಮುಂಜಾನೆ ತನಕವೂ ಮುಂದುವರಿದು ಮುಂಜಾನೆ 4 ಗಂಟೆಗೆ ಮಸೂದೆ ಅಂಗೀಕರಿಸಲ್ಪಟ್ಟಿತು. ಸುದೀರ್ಘ 17 ಗಂಟೆ ಕಲಾಪದಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರ ಪಾಲ್ಗೊಳ್ಳುವಿಕೆಯನ್ನು ಬೆಂಗಳೂರು ದಕ್ಷಿಣ ಸಂಸದ ಮತ್ತು ಬಿಜೆಪಿ ನಾಯಕ ತೇಜಸ್ವಿ ಸೂರ್ಯ ಪ್ರೇರಣಾದಾಯಿ ನಡೆ ಎಂದು ಪ್ರಶಂಸಿಸಿದ್ದಾರೆ. ತೇಜಸ್ವಿ ಸೂರ್ಯ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಜೆಡಿಎಸ್ ನಾಯಕ ಹೆಚ್ ಡಿ ದೇವೇಗೌಡ ಅವರು ಕಲಾಪದಲ್ಲಿ ಪಾಲ್ಗೊಳ್ಳುವ ರೀತಿ ಇತರೆ ಸಂಸದರಿಗೆ ಆದರ್ಶ ಎಂದು ಹೇಳಿದರು.
ರಾಜ್ಯಸಭೆ ಎಂಬುದು ಹಿರಿಯರ ಮನೆ. ಬಹುತೇಕ ರಾಜ್ಯಸಭಾ ಸದಸ್ಯರು ಹಿರಿಯ ನಾಗರಿಕರು. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು 91ರ ಹರೆಯದಲ್ಲೂ ಚರ್ಚೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಇದು ನಮಗೆಲ್ಲರಿಗೂ ಪ್ರೇರಣಾದಾಯಿ ಎಂದು ತೇಜಸ್ವಿ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.