Bengaluru, ಮೇ 30 -- ಮಂಗಳೂರು: ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕುರಿಯಾಳ ಗ್ರಾಮದ ಇರಾ ಕೋಡಿ ಎಂಬಲ್ಲಿ ಮೇ 27ರಂದು ಅಪರಾಹ್ನ 3.30ರ ಸುಮಾರಿಗೆ ನಡೆದ ಮರಳು ಸಾಗಾಟದ ಪಿಕಪ್ ವಾಹನ ಚಾಲಕ, ಕೊಳತ್ತಮಜಲು ನಿವಾಸಿ ಅಬ್ದುಲ್ ರಹಿಮಾನ್ ಯಾನೆ ರಹೀಂ (33) ಅವರ ಹತ್ಯೆಯ ಹಿಂದೆ ಪಕ್ಕಾ ವೃತ್ತಿಪರ ಹಂತಕರು ಕೈಯಾಡಿಸಿದ್ದಾರೆಯೇ? ಕೊಲೆ ಮಾಡುವ ಮೊದಲು ಕೆಲವಾರು ದಿನಗಳ ವ್ಯವಸ್ಥಿತ ಯೋಜನೆ ರೂಪಿಸಲಾಗಿದೆಯೇ ಎಂಬ ಅಂಶ ಇದೀಗ ಚರ್ಚೆಗೆ ಬರುತ್ತಿದೆ. ಕೊಲೆ ನಡೆದ ರೀತಿ ಇಂಥದೊಂದು ಪ್ರಶ್ನೆಗಳನ್ನು ಹುಟ್ಟು ಹಾಕಿದ್ದು, ಪೊಲೀಸ್ ತನಿಖೆಯೂ ಇದೇ ಜಾಡಿನಲ್ಲಿ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.
2022 ರ ಜುಲೈ 26ರಂದು ಮಂಗಳವಾರ ರಾತ್ರಿ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದ ಯುವ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣ ಅತ್ಯಂತ ವ್ಯವಸ್ಥಿತ ಯೋಜನೆಯ ಮೂಲಕ ನಡೆದಿತ್ತು ಎಂಬುದು ಎನ್ಐಎ ತನಿಖೆಯಿಂದ ಬೆಳಕಿಗೆ ಬಂದಿತ್ತು. ಪ್ರವೀಣ್ ನೆಟ್ಟಾರ್ ಚಲನವಲನಗಳನ್ನು ಪೂರ್ತಿ ಅಧ್ಯಯನ ಮಾಡಿ ಸಮಯ, ಸಂದರ್ಭ ಮೊದಲೇ ನಿಗದಿ ಮಾಡಿ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.