ಭಾರತ, ಮಾರ್ಚ್ 22 -- ನಂಜನಗೂಡು: ತಂಗಿಯ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಸಾಮಗ್ರಿಗಳನ್ನು ತರಲು ತೆರಳಿದ ಯುವಕ ರಸ್ತೆ ಕಾಮಗಾರಿಗೆ ತೋಡಿದ್ದ ಭಾರಿ ಹಳ್ಳಕ್ಕೆ ಬಿದ್ದು ಕೋಮಾ ಸ್ಥಿತಿಗೆ ತಲುಪಿರುವ ಘಟನೆ ನಂಜನಗೂಡು ತಾಲ್ಲೂಕು ಹುಲ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹೆಡಿಯಾಲ ಗ್ರಾಮದ ವೀರಭದ್ರಸ್ವಾಮಿ ಘಟನೆಯಲ್ಲಿ ಗಾಯಗೊಂಡ ಯುವಕ. ಈತ ಸದ್ಯ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕಾಮಗಾರಿ ನಡೆಸುವ ವೇಳೆ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದ ಗುತ್ತಿಗೆದಾರ ಗೋವಿಂದೇಗೌಡ ವಿರುದ್ದ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಂಗಿಯ ನಿಶ್ಚಿತಾರ್ಥ ಹಿನ್ನೆಲೆಯಲ್ಲಿ ವೀರಭದ್ರಸ್ವಾಮಿ ಹೆಡಿಯಾಲ ಗ್ರಾಮದಿಂದ ಹುಲ್ಲಹಳ್ಳಿಗೆ ಪಲ್ಸರ್ ಬೈಕ್ನಲ್ಲಿ ತೆರಳಿದ್ದಾನೆ. ಮಾದಾಪುರ ಹಾಗೂ ಕಾರ್ಯ ಗ್ರಾಮದ ನಡುವಿನ ಮುಖ್ಯ ರಾಜ್ಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ವೇಳೆ ಡೆಕ್ ಕಾಮಗಾರಿ ನಡೆಯುತ್ತಿದ್ದ ಭಾರಿ ಹಳ್ಳಕ್ಕೆ ಉರುಳಿ ಬಿದ್ದಿದ್ದಾನೆ. ಕಾಮಗಾರಿಗಾಗಿ ಅಳವಡಿಸಿದ್ದ ಕಬ್ಬಿಣದ ರ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.