Bangalore, ಮೇ 8 -- ಈ ಮೊದಲು ಸುಖೋಯ್-30 ವಿಮಾನಕ್ಕೆ ಅಳವಡಿಸಿರುವ ಬ್ರಹ್ಮೋಸ್ ಮತ್ತು ಇತರೆ ಕ್ಷಿಪಣಿಗಳ ಬಗ್ಗೆ ವಿಸ್ತಾರವಾಗಿ ತಿಳಿಸಿದ್ದೆ. ಈಗ ರಫೇಲಿನಲ್ಲಿರುವ ಅಸ್ತ್ರಗಳ ಬಗ್ಗೆ ಒಂದಿಷ್ಟು ವಿಷಯಗಳನ್ನು ಹೇಳುತ್ತೇನೆ. ರಫೇಲ್ ವಿಮಾನದ ಹೊಟ್ಟೆಭಾಗದಲ್ಲಿ ಒಟ್ಟು ಹದಿನಾಲ್ಕು ಸ್ಟ್ರಾಂಗ್ ಪಾಯಿಂಟ್ಗಳಿರುತ್ತವೆ. ಈ ಪಾಯಿಂಟುಗಳನ್ನು ಕ್ಷಿಪಣಿಗಳನ್ನು ಅಥವಾ ಇಂಧನದ ಟ್ಯಾಂಕುಗಳನ್ನು ಅಳವಡಿಸಲು ಉಪಯೋಗಿಸಲಾಗುತ್ತದೆ. ಇದೊಂದು ಕ್ರಮಪಲ್ಲಟನೆಯ ಸಂಯೋಜನೆ, ಅಂದರೆ ಆಕ್ರಮಣದ ಉದ್ದೇಶದ ಅನುಸಾರವಾಗಿ ವಿವಿಧ ತರಹದ ಮಿಸೈಲುಗಳನ್ನು ಅಳವಡಿಸಲಾಗುತ್ತದೆ. ಒಟ್ಟಿನಲ್ಲಿ ಸುಮಾರು 9500 ಕೇಜಿಯಷ್ಟು ಭಾರವನ್ನು ಸಲೀಸಾಗಿ ಹೇರಿಕೊಂಡು ಹೋಗುತ್ತದೆ.
ಬತ್ತಳಿಕೆಯಲ್ಲಿರುವ ಮೊಟ್ಟಮೊದಲ ಬ್ರಹ್ಮಾಸ್ತ್ರದ ಹೆಸರು 'ಮೀಟಿಯೋರ್'. ಪ್ರಪಂಚದ ಬೇರೆ ಯಾವ ದೇಶದಲ್ಲೂ ಈ ಶ್ರೇಣಿ ಮತ್ತು ಸಾಮರ್ಥ್ಯದ ಕ್ಷಿಪಣಿ ಇನ್ನೂ ಬಂದಿಲ್ಲ. ಇದು ರಫೇಲ್ ವಿಮಾನದಿಂದ ಇನ್ನೊಂದು ಯುದ್ಧವಿಮಾನದ ಮೇಲೆ ಪ್ರಯೋಗಿಸುವ ಕ್ಷಿಪಣಿ. ಇದರ ಕಾರ್ಯಪರಿಧಿ ಸುಮಾರು 120 ಕಿಮೀವರೆ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.