ಭಾರತ, ಮೇ 9 -- ದೇಶದಲ್ಲಿ ಟಾಟಾ ಮೋಟಾರ್ಸ್​ ಕಂಪನಿಯ ವಾಹನಗಳಿಗೆ ಬೇಡಿಕೆ ತುಸು ಹೆಚ್ಚೇ ಇರುತ್ತದೆ. ಅದಕ್ಕೆ ಕಾರಣ ಗುಣಮಟ್ಟತೆ, ವೈಶಿಷ್ಟ್ಯಗಳು ಮತ್ತು ಸುಧಾರಣೆ. ಪ್ರಯಾಣಿಕರ ಸುರಕ್ಷತೆಯನ್ನೇ ಮೊದಲ ಆದ್ಯತೆ ಮಾಡಿಕೊಂಡಿರುವ ಟಾಟಾ ಈ 3 ವಿಚಾರಗಳಲ್ಲೂ ರಾಜಿಯಾಗುವುದೇ ಇಲ್ಲ! ಮತ್ತೊಂದು ವಿಚಾರ ಏನೆಂದರೆ ಬಡವರಿಗೂ ಅಗ್ಗದ ದರದಲ್ಲಿ ಕಾರು ದೊರೆಯುವಂತೆ ಮಾಡುತ್ತದೆ ಈ ಕಂಪನಿ.

ಅಂತಹ ಕಾರುಗಳ ಒಂದರ ಕುರಿತು ವಿಶ್ಲೇಷಿಸುವ ಕೆಲಸಕ್ಕೆ ನಾವಿಂದು ಕೈ ಹಾಕಿದ್ದೇವೆ. ಕಡಿಮೆ ದರದಲ್ಲಿ ಮಾರುಕಟ್ಟೆಯಲ್ಲಿ ಅತ್ಯಂತ ಬೇಡಿಕೆ ಹೊಂದಿರುವ ಕಾರು ಎಂದರೆ 'ಟಾಟಾ ಕರ್ವ್​ ಎಸ್​ಯುಪಿ ಕೂಪೆ'. ಇದು ಎಸ್​​ಯುಪಿ ಕೂಪೆ ವಿನ್ಯಾಸ ಹೊಂದಿರುವ ಭಾರತದ ಮೊಟ್ಟ ಮೊದಲ ಮಿಡ್​ಸೈಜ್ ಎಸ್​ಯುವಿ ಎಂದೂ ಪ್ರಸಿದ್ಧಿ ಪಡೆದಿರುವುದು ವಿಶೇಷ.

ಉದ್ಯಮಿ ರತನ್ ಟಾಟಾ ನಿಧನಕ್ಕೂ ಮುನ್ನ ಅವರ ಕಂಪನಿಯಿಂದ ಬಿಡುಗಡೆಗೊಂಡ ಕೊನೆಯ ಕಾರು ಇದಾಗಿದೆ. ಟಾಟಾ ಕರ್ವ್​ 2024ರ ಆಗಸ್ಟ್​ 7ರ ಮಾರುಕಟ್ಟೆಯಲ್ಲಿ ಬಿಡುಗಡೆಯಾದರೆ, ಇದಾಗಿ ಎರಡು ತಿಂಗಳು ಅಂದರೆ 2024ರ ಅಕ್ಟೋಬರ್ ...