ಭಾರತ, ಮಾರ್ಚ್ 18 -- ಪಾಕಿಸ್ತಾನ ಮೂಲದ ಕ್ಲಬ್ ಕ್ರಿಕೆಟಿಗ ಜುನೈಲ್ ಜಾಫರ್ ಅವರು (Junaid Zafar Khan) ಸ್ಥಳೀಯ ಪಂದ್ಯದ ವೇಳೆ ಬಿಸಿಲಿನ ತಾಪಮಾನ ಹೆಚ್ಚಾಗಿ ಮೈದಾನದಲ್ಲೇ ಕುಸಿದು ಬಿದ್ದು ದುರಂತ ಅಂತ್ಯ ಕಂಡಿದ್ದಾರೆ. ಆಡುತ್ತಿರುವಾಗಲೇ ಕುಸಿದು ಮೃತಪಟ್ಟ ವರದಿ ದಕ್ಷಿಣ ಆಸ್ಟ್ರೇಲಿಯಾದ ಅಡಿಲೇಡ್ ವ್ಯಾಪ್ತಿಯ ಕಾನ್ಕಾರ್ಡಿಯಾ ಕಾಲೇಜ್ ಓವಲ್ನಲ್ಲಿ ಘಟನೆ ಜರುಗಿದೆ. 40 ವರ್ಷದ ಕ್ರಿಕೆಟಿಗ ತೀವ್ರ ಶಾಖದ ಹೊಡೆತಕ್ಕೆ ಮೃತಪಟ್ಟಿದ್ದಾರೆ. ಪಂದ್ಯ ಜರುಗುತ್ತಿದ್ದ ಅವಧಿಯಲ್ಲಿ ತಾಪಮಾನ 41.7 (107degF) ಡಿಗ್ರಿ ಸೆಲ್ಸಿಯಸ್ ಇತ್ತು ಎನ್ನಲಾಗಿದೆ. ಪಂದ್ಯದ ವೇಳೆ ಅವರು 4 ಬಾರಿ ಕುಸಿದು ಬಿದ್ದಿದ್ದರು.
ಆಸ್ಟ್ರೇಲಿಯಾದ news.com.au ಮಾಧ್ಯಮ ವರದಿ ಪ್ರಕಾರ, ಓಲ್ಡ್ ಕಾನ್ಕಾರ್ಡಿಯಾ ಕ್ರಿಕೆಟ್ ಕ್ಲಬ್ ಪರ ಆಟಗಾರ ಜುನೈಲ್ ಬ್ಯಾಟಿಂಗ್ ನಡೆಸುತ್ತಿದ್ದ ಅವಧಿಯಲ್ಲಿ ದುರಂತ ನಡೆದಿದೆ. ಆದರೆ ಬ್ಯಾಟಿಂಗ್ಗೂ ಮುನ್ನ ಇದೇ ತಾಪಮಾನದಲ್ಲಿ 40 ಓವರ್ಗಳ ಕಾಲ ಫೀಲ್ಡಿಂಗ್ ಮಾಡಿದ್ದರು. ಇದರ ಬೆನ್ನಲ್ಲೇ ಏಳು ಓವರ್ಗಳು ಬ್ಯಾಟಿಂಗ್ ಮ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.