ಭಾರತ, ಮಾರ್ಚ್ 18 -- ಪಾಕಿಸ್ತಾನ ಮೂಲದ ಕ್ಲಬ್ ಕ್ರಿಕೆಟಿಗ ಜುನೈಲ್ ಜಾಫರ್ ಅವರು (Junaid Zafar Khan) ಸ್ಥಳೀಯ ಪಂದ್ಯದ ವೇಳೆ ಬಿಸಿಲಿನ ತಾಪಮಾನ ಹೆಚ್ಚಾಗಿ ಮೈದಾನದಲ್ಲೇ ಕುಸಿದು ಬಿದ್ದು ದುರಂತ ಅಂತ್ಯ ಕಂಡಿದ್ದಾರೆ. ಆಡುತ್ತಿರುವಾಗಲೇ ಕುಸಿದು ಮೃತಪಟ್ಟ ವರದಿ ದಕ್ಷಿಣ ಆಸ್ಟ್ರೇಲಿಯಾದ ಅಡಿಲೇಡ್​​ ವ್ಯಾಪ್ತಿಯ ಕಾನ್ಕಾರ್ಡಿಯಾ ಕಾಲೇಜ್​​ ಓವಲ್​ನಲ್ಲಿ ಘಟನೆ ಜರುಗಿದೆ. 40 ವರ್ಷದ ಕ್ರಿಕೆಟಿಗ ತೀವ್ರ ಶಾಖದ ಹೊಡೆತಕ್ಕೆ ಮೃತಪಟ್ಟಿದ್ದಾರೆ. ಪಂದ್ಯ ಜರುಗುತ್ತಿದ್ದ ಅವಧಿಯಲ್ಲಿ ತಾಪಮಾನ 41.7 (107degF) ಡಿಗ್ರಿ ಸೆಲ್ಸಿಯಸ್ ಇತ್ತು ಎನ್ನಲಾಗಿದೆ. ಪಂದ್ಯದ ವೇಳೆ ಅವರು 4 ಬಾರಿ ಕುಸಿದು ಬಿದ್ದಿದ್ದರು.

ಆಸ್ಟ್ರೇಲಿಯಾದ news.com.au ಮಾಧ್ಯಮ ವರದಿ ಪ್ರಕಾರ, ಓಲ್ಡ್ ಕಾನ್ಕಾರ್ಡಿಯಾ ಕ್ರಿಕೆಟ್ ಕ್ಲಬ್‌ ಪರ ಆಟಗಾರ ಜುನೈಲ್ ಬ್ಯಾಟಿಂಗ್ ನಡೆಸುತ್ತಿದ್ದ ಅವಧಿಯಲ್ಲಿ ದುರಂತ ನಡೆದಿದೆ. ಆದರೆ ಬ್ಯಾಟಿಂಗ್​ಗೂ ಮುನ್ನ ಇದೇ ತಾಪಮಾನದಲ್ಲಿ 40 ಓವರ್‌ಗಳ ಕಾಲ ಫೀಲ್ಡಿಂಗ್ ಮಾಡಿದ್ದರು. ಇದರ ಬೆನ್ನಲ್ಲೇ ಏಳು ಓವರ್​​ಗಳು ಬ್ಯಾಟಿಂಗ್ ಮ...