ಭಾರತ, ಏಪ್ರಿಲ್ 6 -- ಮಲಯಾಳಂನ ಖ್ಯಾತ ನಟ ಮೋಹನ್ಲಾಲ್ ಹಾಗೂ ನಟಿ ಮಾಳವಿಕಾ ಮೋಹನ್ 'ಹೃದಯಪೂರ್ವಂ' ಎಂಬ ಚಿತ್ರದಲ್ಲಿ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಸತ್ಯನ್ ಅಂತಿಕಾಡ್ ನಿರ್ದೇಶನ ಈ ಚಿತ್ರಕ್ಕಿದೆ. ಈ ಸಿನಿಮಾಕ್ಕೆ ಸಂಬಂಧಿಸಿ ಮಾಳವಿಕಾ ಮೋಹನ್ ಇನ್ಸ್ಟಾಗ್ರಾಂ ಪೋಸ್ಟ್ ಒಂದನ್ನು ಹಾಕಿದ್ದು, ಚಿತ್ರದ ಮೊದಲ ಹಂತದ ಶೂಟಿಂಗ್ ಮುಗಿದಿದೆ ಎಂದು ಹೇಳಿಕೊಂಡಿದ್ದರು. ಆದರೆ ಈ ಪೋಸ್ಟ್ಗೆ ಬಂದ ಕಾಮೆಂಟ್ ಒಂದು ಮಾಳವಿಕಾ ಕೋಪ ನೆತ್ತಿಗೇರುವಂತೆ ಮಾಡಿದೆ.
ಮಾಳವಿಕಾ ಹಾಕಿದ ಪೋಸ್ಟ್ಗೆ ಕಾಮೆಂಟ್ ಮಾಡಿದ ಅಭಿಮಾನಿಯೊಬ್ಬರು ಮಾಳವಿಕಾ ಹಾಗೂ ಮೋಹನ್ಲಾಲ್ ನಡುವೆ 33 ವರ್ಷಗಳ ಅಂತರವಿದೆ ಎಂಬುದನ್ನು ಎತ್ತಿ ತೋರಿಸಿದ್ದರು. ಈ ಕಾಮೆಂಟ್ ನೋಡಿ ಗರಂ ಆಗಿರುವ ಮಾಳವಿಕಾ ರೊಚ್ಚಿಗೆದ್ದು ಪ್ರತಿಕ್ರಿಯೆ ನೀಡಿದ್ದಾರೆ.
ಮಾಳವಿಕಾ ಅವರ ಜೊತೆ ಮೋಹನ್ಲಾಲ್ ಪ್ರೇಮಿಯಾಗಿ ನಟಿಸಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಆ ವ್ಯಕ್ತಿ ಮೋಹನ್ಲಾಲ್ ತಮ್ಮ ವಯಸ್ಸಿಗೆ ಹೊಂದಿಕೆಯಾಗದ ಪಾತ್ರವನ್ನು ಮಾಡಿದ್ದಾರೆ ಎಂದು ಕಾಮೆಂಟ್ ಮಾಡಿದ್ದರು....
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.