ಭಾರತ, ಏಪ್ರಿಲ್ 6 -- ಮಲಯಾಳಂನ ಖ್ಯಾತ ನಟ ಮೋಹನ್‌ಲಾಲ್ ಹಾಗೂ ನಟಿ ಮಾಳವಿಕಾ ಮೋಹನ್ 'ಹೃದಯಪೂರ್ವಂ' ಎಂಬ ಚಿತ್ರದಲ್ಲಿ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಸತ್ಯನ್ ಅಂತಿಕಾಡ್ ನಿರ್ದೇಶನ ಈ ಚಿತ್ರಕ್ಕಿದೆ. ಈ ಸಿನಿಮಾಕ್ಕೆ ಸಂಬಂಧಿಸಿ ಮಾಳವಿಕಾ ಮೋಹನ್ ಇನ್‌ಸ್ಟಾಗ್ರಾಂ ಪೋಸ್ಟ್ ಒಂದನ್ನು ಹಾಕಿದ್ದು, ಚಿತ್ರದ ಮೊದಲ ಹಂತದ ಶೂಟಿಂಗ್ ಮುಗಿದಿದೆ ಎಂದು ಹೇಳಿಕೊಂಡಿದ್ದರು. ಆದರೆ ಈ ಪೋಸ್ಟ್‌ಗೆ ಬಂದ ಕಾಮೆಂಟ್ ಒಂದು ಮಾಳವಿಕಾ ಕೋಪ ನೆತ್ತಿಗೇರುವಂತೆ ಮಾಡಿದೆ.

ಮಾಳವಿಕಾ ಹಾಕಿದ ಪೋಸ್ಟ್‌ಗೆ ಕಾಮೆಂಟ್ ಮಾಡಿದ ಅಭಿಮಾನಿಯೊಬ್ಬರು ಮಾಳವಿಕಾ ಹಾಗೂ ಮೋಹನ್‌ಲಾಲ್ ನಡುವೆ 33 ವರ್ಷಗಳ ಅಂತರವಿದೆ ಎಂಬುದನ್ನು ಎತ್ತಿ ತೋರಿಸಿದ್ದರು. ಈ ಕಾಮೆಂಟ್ ನೋಡಿ ಗರಂ ಆಗಿರುವ ಮಾಳವಿಕಾ ರೊಚ್ಚಿಗೆದ್ದು ಪ್ರತಿಕ್ರಿಯೆ ನೀಡಿದ್ದಾರೆ.

ಮಾಳವಿಕಾ ಅವರ ಜೊತೆ ಮೋಹನ್‌ಲಾಲ್ ಪ್ರೇಮಿಯಾಗಿ ನಟಿಸಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಆ ವ್ಯಕ್ತಿ ಮೋಹನ್‌ಲಾಲ್ ತಮ್ಮ ವಯಸ್ಸಿಗೆ ಹೊಂದಿಕೆಯಾಗದ ಪಾತ್ರವನ್ನು ಮಾಡಿದ್ದಾರೆ ಎಂದು ಕಾಮೆಂಟ್ ಮಾಡಿದ್ದರು....