Bengaluru, ಮೇ 26 -- ಕೆಎಸ್ಡಿಎಲ್ಗೆ ಬ್ರ್ಯಾಂಡ್ ಅಂಬಾಸಿಡರ್ ನೇಮಕದ ವಿಷಯದಲ್ಲಿ ಎರಡು ಅಭಿಪ್ರಾಯಗಳೂ ವ್ಯಕ್ತವಾಗಿವೆ. ಆ ಎರಡೂ ಅಭಿಪ್ರಾಯಗಳು ಅವರವರ ನೆಲೆಯಲ್ಲಿ ಸರಿಯೇ. ಆದರೆ, ವಾಸ್ತವವನ್ನು ಗಮನಿಸಿದರೆ ಸ್ವಲ್ಪ ಬೇರೆ ಚಿತ್ರಣ ಸಿಗುತ್ತದೆ. ಸರ್ಕಾರ ಹಾಗೂ ಸಚಿವರು ಹೇಳುವ ಪ್ರಕಾರ ಕೆಎಸ್ಡಿಎಲ್ ಭಾರಿ ಪ್ರಗತಿ ಸಾಧಿಸುತ್ತಿದೆ ಎಂದು! ವಾಸ್ತವ ಏನು? ನಾವು ಕೆಎಸ್ಡಿಎಲ್ ಅನ್ನು ಖಾಸಗಿ ಕಂಪನಿಗಳ ಜೊತೆಗೆ ಹೋಲಿಸಿ ನೋಡಿದಾಗ ಕೆಎಸ್ಡಿಎಲ್ ಎಲ್ಲಿದೆ? FMCG ವಿಭಾಗದಲ್ಲಿ HUL ದೇಶದ ದೊಡ್ಡ ಕಂಪನಿ. ಅದರ ವಿವಿಧ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಡವ್ ಸೋಪ್ನಿಂದ ವಿಮ್ ಲಿಕ್ವಿಡ್ವರೆಗೆ ಎಲ್ಲವೂ ಸಿಗುತ್ತವೆ.
ಕೆಎಸ್ಡಿಎಲ್ 2022-23 ರಲ್ಲಿ 182 ಕೋಟಿ ರೂ. ಆದಾಯ ಬಂದಿದ್ದರೆ, 2023-24 ರಲ್ಲಿ 362 ಕೋಟಿ ರೂ. ಆದಾಯ ಬಂದಿದೆ. ಅಂದರೆ, ಆದಾಯ ದುಪ್ಪಟ್ಟಾಗಿದೆ. ಅಂದರೆ, ಮಾರಾಟವೂ ದುಪ್ಪಟ್ಟಾಗಿರಬೇಕಲ್ಲ? ಆದರೆ, ಹಾಗಾಗಿಲ್ಲ. ಮಾರಾಟ ಹೆಚ್ಚಳವಾಗಿದ್ದು ಕೇವಲ 13%! 27,229.487 ಮೆ.ಟ. ಇಂದ 31,189.430 ಮೆ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.