Bengaluru, ಮೇ 26 -- ಮೈಸೂರು: ಡಿವಿಜಿ ಬಳಗ ಪ್ರತಿಷ್ಠಾನದ 'ಡಿವಿಜಿ ಪ್ರಶಸ್ತಿ' ಪ್ರದಾನ ಸಮಾರಂಭ ಜೂನ್ 22 ರಂದು ಮೈಸೂರಿನ ರಮಾ ಗೋವಿಂದ ಸಭಾಂಗಣ, ಗಾನಭಾರತಿ ಕುವೆಂಪು ನಗರದಲ್ಲಿ ನಡೆಯಲಿದೆ. ಈ ಬಾರಿ ಖ್ಯಾತ ಸಾಹಿತಿ, ಕವಿ 'ತನಾಶಿ' ಎಂದೇ ಪ್ರಸಿದ್ಧರಾದ ಟಿ ಎನ್ ಶಿವಕುಮಾರ್ ಅವರಿಗೆ 2025 ರ ಡಿವಿಜಿ ಪ್ರಶಸ್ತಿ ನೀಡಲಾಗುವುದು ಎಂದು ಮೈಸೂರಿನ ಡಿವಿಜಿ ಬಳಗ ಪ್ರತಿಷ್ಠಾನದ ಸಂಚಾಲಕ ಕನಕರಾಜು ತಿಳಿಸಿದ್ದಾರೆ.
ಖ್ಯಾತ ವಾಗ್ಮಿ ವಿದ್ವಾನ್ ಜಿ ಎಸ್ ನಟೇಶ್ ಅವರು ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ ಹಾಗೂ ಸಂಗೀತಗಾರರೂ ಮತ್ತು ಸಂಗೀತ ಶಾಸ್ತ್ರಜ್ಞರೂ ಆದ ವಿದ್ವಾನ್ ಡಾ. ರಾ ಸ ನಂದಕುಮಾರ್ ಅವರು ಭಾಗವಹಿಸಲಿದ್ದಾರೆ.
ಮೈಸೂರಿನ ರಮಾ ಗೋವಿಂದ ಸಭಾಂಗಣದಲ್ಲಿ ನಡೆಯುವ ಈ ಡಿವಿಜಿ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಎಲ್ಲರೂ ಬಂದು ಪಾಲ್ಗೊಳ್ಳುವಂತೆ ಕನಕರಾಜು ಆಹ್ವಾನ ನೀಡಿದ್ದಾರೆ.
ತನಾಶಿ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದವರು ಟಿ ಎನ್ ಶಿವಕುಮಾರ್. ಮೂಲತಃ ಮಂಡ್ಯ ಜಿ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.