Bengaluru, ಮೇ 19 -- ಮೈಸೂರು : ಮೈಸೂರಿನಲ್ಲಿ ಭಾನುವಾರ ಇಡೀ ರಾತ್ರಿ ಸುರಿದ ಜಿಟಿ ಜಿಟಿ ಮಳೆಗೆ ಮರದ ಕೊಂಬೆ ಮತ್ತು ವಿದ್ಯುತ್ ಕಂಬ ಮುರಿದು ಬಿದ್ದಿದೆ. ಅದರ ಪರಿಣಾಮ ಒಂದು ಕಾರು ಮತ್ತು ಒಂದು ಬೈಕ್ ಜಖಂಗೊಂಡಿದ್ದು, ಮೈಸೂರಿನ ಚಾಮರಾಜಪುರಂನ ಏರ್ಲೈನ್ಸ್ ಹೋಟೆಲ್ ಬಳಿ ಘಟನೆ ಸಂಭವಿಸಿದೆ. ಕಾರು ನಿಲ್ಲಿಸಿ ಹೋಗಿದ್ದ ಕಾರಣ ದೊಡ್ಡ ಅನಾಹುತ ತಪ್ಪಿದೆ. ಸ್ಥಳಕ್ಕೆ ಆಗಮಿಸಿದ ಮಹಾನಗರಪಾಲಿಕೆ ಸಿಬ್ಬಂದಿಯಿಂದ ಮರದ ಅವಶೇಷಗಳ ತೆರವು ಕಾರ್ಯಾಚರಣೆ ನಡೆದಿದೆ.
ಜಿಲ್ಲೆಯಾದ್ಯಂತ ವಿವಿಧೆಡೆ ಭಾರೀ ಮಳೆಯಾಗಿದ್ದು, 15 ಎಕರೆ ತಂಬಾಕು ಸಸಿ ನೀರಿನಲ್ಲಿ ಮುಳುಗಡೆಯಾಗಿ ರೈತರು ನಷ್ಟ ಅನುಭವಿಸುವಂತಾಗಿದೆ. ಪಿರಿಯಾಪಟ್ಟಣ ತಾಲೂಕಿನ ರಾಮನಾಥ್ ತುಂಗ ಪಂಚಾಯತ್ ವ್ಯಾಪ್ತಿಯಲ್ಲಿ ತಂಬಾಕು ಸಸಿಗಳು ಮುಳುಗಡೆಯಾಗಿ ಸಮಸ್ಯೆ ಉಂಟಾಗಿದೆ.
ಭರ್ಜರಿಯಾಗಿ ಸುರಿದ ಮಳೆಯಿಂದ ಕೆರೆ ತುಂಬಿ ನೀರು ಹರಿದ ಪರಿಣಾಮ ಕೆಲವು ದಿನಗಳ ಹಿಂದೆ ನಾಟಿ ಮಾಡಿದ್ದ ತಂಬಾಕು ಸಸಿಗಳು ಮುಳುಗಡೆಯಾಗಿವೆ. ತಂಬಾಕು ಬೆಳೆದ ರೈತರ ಬದುಕನ್ನು ಕೆರೆಯ ನೀರು ಕಸಿದುಕೊಂಡಿದೆ. ಕೆರೆ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.