ಭಾರತ, ಏಪ್ರಿಲ್ 25 -- ಸ್ಯಾಂಡಲ್ವುಡ್ ನಟ ಧ್ರುವ ಸರ್ಜಾ ಸದ್ಯಕ್ಕೆ ʻಕೆಡಿʼ ಸಿನಿಮಾ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಶೂಟಿಂಗ್ ಕೆಲಸಗಳನ್ನೂ ಬಹುತೇಕ ಮುಗಿಸಿಕೊಂಡಿದ್ದಾರೆ. ಈ ನಡುವೆ, ಹೊಸ ತಂಡಗಳ ಸಿನಿಮಾ ಪ್ರಯತ್ನಕ್ಕೆ ಬೆನ್ನು ತಟ್ಟುತ್ತ ಬರುತ್ತಿದ್ದಾರೆ. ಟೀಸರ್, ಟ್ರೇಲರ್ ಇನ್ನಿತ್ಯಾದಿ ಸಿನಿಮಾ ಸಂಬಂಧಿ ಕೆಲಸಗಳಿಗೆ ಬೆಂಬಲ ಸೂಚಿಸುತ್ತಿದ್ದಾರೆ. ಹೀಗಿರುವಾಗಲೇ ಉತ್ತರ ಕರ್ನಾಟಕದ ಜವಾರಿ ಭಾಷೆಯ ಪಪ್ಪಿ ಸಿನಿಮಾವೊಂದು ಇದೀಗ ನಟ ಧ್ರುವ ಸರ್ಜಾಗಿಷ್ಟವಾಗಿದೆ. ಯುವ ಪ್ರತಿಭೆಗಳ ಈ ಚಿತ್ರಕ್ಕೆ ಸಾಥ್ ನೀಡಿದ್ದಾರೆ ಧ್ರುವ.
ಹೊಸಬರೇ ಸೇರಿಕೊಂಡು ಉತ್ತರ ಕರ್ನಾಟದ ಭಾಷೆಯಲ್ಲೊಂದು ʻಪಪ್ಪಿʼ ಎಂಬ ಸಿನಿಮಾ ಮಾಡಿದ್ದು, ಈ ಟ್ರೇಲರ್ ಈಗಾಗಲೇ ದಾಖಲೆ ಬರೆದಿದೆ. ಟ್ರೇಲರ್ ನೋಡಿದವವರೆಲ್ಲರೂ ಹೊಟ್ಟೆ ತುಂಬ ನಕ್ಕು ನಲಿಯುವುದರ ಜೊತೆಗೆ ಭಾವುಕರಾಗಿದ್ದಾರೆ. ಒಂದೊಳ್ಳೆ ಕಥೆ ಹೇಳೋದಿಕ್ಕೆ ಹೊರಟಿರುವ ಯುವ ಪ್ರತಿಭೆಗಳಿಗೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಾಥ್ ಕೊಟ್ಟಿದ್ದಾರೆ.
ಈ ಹಿಂದೆ ʻಫಸ್ಟ್ ಲವ್ʼ ಸಿನಿಮಾ ಮಾಡಿ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.