Melkote, ಏಪ್ರಿಲ್ 29 -- ಮೇಲುಕೋಟೆ: 1008ನೇ ಜಯಂತ್ಯುತ್ಸವದ ನಿಮಿತ್ತ ರಾಮಾನುಜಾಚಾರ್ಯರಿಗೆ ಸೋಮವಾರ ರಾತ್ರಿ ಅನೂಚಾನ ಸಂಪ್ರದಾಯದಂತೆ ಗೋವಿಂದರಾಜಮುಡಿ ಉತ್ಸವ ವೈಭವದಿಂದ ನೆರವೇರಿತು. ಸಹಸ್ರಾರು ಭಕ್ತರು ಗೋವಿಂದರಾಜಮುಡಿಯ ದರ್ಶನ ಪಡೆದರು. ಮಹಾಮಂಗಳಾರತಿ ನೆರವೇರಿಸಿದ ನಂತರ ರಾಮಾನುಜ ಯತಿರಾಜ ಎಂಬ ಭಕ್ತರ ಹಷರ್ೋದ್ಘಾರದ ನಡುವೆ ಉತ್ಸವಕ್ಕೆ ಚಾಲನೆ ನೀಡಲಾಯಿತು. ಶಾಸ್ತ್ರೋಕ್ತವಾದ ದಿವ್ಯಪ್ರಬಂಧ ಪಾರಾಯಣ ಹಾಗೂ ವಿಶೇಷ ಮಂಗಳವಾದ್ಯದೊಂದಿಗೆ ಆಚಾರ್ಯ ರಾಮಾನುಜರ ಉತ್ಸವ ತಿರುವೀದಿಗಳಲ್ಲಿ ನಡೆಯಿತು.
ಇದಲ್ಲದೇ ದೇವಾಲಯದಲ್ಲಿ ಕೊಡೈತಿರುನಾಳ್ ಸಮಾರೋಪದ ನಿಮಿತ್ತವೈಮಾಳಿಗೆ ಉತ್ಸವ ಹಾಗೂ 1008ನೇ ಜಯಂತ್ಯುತ್ಸವದ 5ನೇ ಉತ್ಸವದ ಅಂಗವಾಗಿ ರಾಮಾನುಜರಿಗೆ ಅಶ್ವವಾಹನೋತ್ಸವ ಪುಪ್ಪಾಲಂಕೃತ ಬಂಗಾರದ ಪಲ್ಲಕ್ಕಿ ಮಹೋತ್ಸವಗಳು ಭಾನುವಾರ ನೆರವೇರಿದವು ನಾಡಿನ ವಿವಿಧ ಭಾಗಗಳಿಂದ ಬಂದಿದ್ದ ಸಹಸ್ರಾರು ಭಕ್ತರು ಭಾಗವಹಿಸಿದ್ದರು.
ಕಳೆದ 14 ದಿನಗಳಿಂದ ದೇವಾಲಯದಲ್ಲಿ ನಡೆಯುತ್ತಿದ್ದ ಕೋಡೈ ತಿರುನಾಳ್ ಸಮಾರೋಪದ ಅಂಗವಾಗಿ ಅಮಾವಾಸ್ಯೆಯಂದು ಚೆಲುವ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.