Bangalore, ಮೇ 8 -- ಕಲರ್ಸ್ ಕನ್ನಡದ ಬಹು ನಿರೀಕ್ಷಿತ ಧಾರಾವಾಹಿ 'ನಂದ ಗೋಕುಲ'ದ ಪ್ರೋಮೋ ಸದ್ದು ಮಾಡುತ್ತಿದೆ. ಇತ್ತೀಚೆಗೆ ತನ್ನ ಸೋಶಿಯಲ್ ಮೀಡಿಯಾದ ಪುಟಗಳಲ್ಲಿ ಈ ಧಾರಾವಾಹಿಯ ಎರಡು ಪ್ರೋಮೋಗಳು ಬಂದಿದ್ದವು. ಆದರೆ ಅವೆರಡರಿಗಿಂತ ಈ ಪ್ರೊಮೊ ಬಹಳ ಸದ್ದು ಮಾಡಿದೆ. ಅದೇ ಕಾರಣಕ್ಕೆ ವೈರಲ್ ಕೂಡಾ ಆಗಿದೆ.
'ಪ್ರೀತಿಸಿ ಮದುವೆಯಾಗಕೂಡದು' ಎಂದು ತಂದೆ ತನ್ನ ಮಕ್ಕಳ ಬಳಿ 'ಭಾಷೆ' ತೆಗೆದುಕೊಳ್ಳುವ ಸನ್ನಿವೇಶ ಇರೋ ಈ ಪ್ರೊಮೋದಲ್ಲಿ ಭಾವನಾತ್ಮಕ ಎಳೆ ಇದೆ. ಗಿರಿಜಾ ತನ್ನ ಗಂಡ ನಂದನ ಜೊತೆ ಮದುವೆಯಾಗಿ 25 ವರ್ಷ ಆಗಿದೆ. ಈ ಸಮಯದಲ್ಲಿ ಅವರ ಮಗ ವಲ್ಲಭ ಅಭಿನಂದಿಸುತ್ತಾನೆ.
ನಂದ, ಗಿರಿಜಾ ತಮ್ಮ ಮಕ್ಕಳ ಜೊತೆ ಹೊರ ಬಂದಾಗ ಎದುರುಗಡೆ ಮನೆಯಲ್ಲಿರೋ ಗಿರಿಜಾಳ ಸಹೋದರರು ಮುಖಾಮುಖಿಯಾಗುತ್ತಾರೆ. ಮಾತಿಗೆ ಮಾತು ಬೆಳೆದು ಅಲ್ಲಿ ಜಗಳವಾಗುತ್ತದೆ.
ಆಗ ನಂದನಿಗೆ ಅಪಮಾನವಾಗುವಂತೆ ಗಿರಿಜಾಳ ಸಹೋದರ ಮಾತಾಡುತ್ತಾನೆ. ಮನೆಯ ಕೆಲಸ ಮಾಡಿಕೊಂಡಿದ್ದ ನಂದ ಅವರ ಒಪ್ಪಿಗೆಯಿಲ್ಲದೆ ಗಿರಿಜಾಳನ್ನು ಪ್ರೀತಿಸಿ ಮದುವೆಯಾದ ವಿಷಯ ಪ್ರಸ್ತಾಪವಾಗುತ್ತದೆ.
...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.