Bangalore, ಏಪ್ರಿಲ್ 16 -- " ಹೆಣ್ಣಲ್ಲವೇ ನಮ್ಮನ್ನೆಲ್ಲಾ ಹಡೆದ ತಾಯಿ

ಹೆಣ್ಣಲ್ಲವೇ ನಮ್ಮನ್ನೆಲ್ಲ ಪೊರೆದವಳು

ಹೆಣ್ಣು ಹೆಣ್ಣೆಂದೇಕೆ ಬೀಳುಗಳೆವರು ಕಣ್ಣು

ಕಾಣದ ಗಾವಿಲರು..!

ಕುವರನಾದೊಡೆ ಬಂದ ಗುಣವೇನದರಿಂದ

ಕುವರಿಯಾದೊಡೆ ಕುಂದೇನು..? "

-ಸಂಚಿ ಹೊನ್ನಮ್ಮ

ಕಳೆದ ಕೆಲವು ದಿನಗಳಿಂದ ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ ಹದಿನೇಳನೇ ಶತಮಾನದ ಸಂಚಿ ಹೊನ್ನಮ್ಮ ಬರೆದ ಸಾಲುಗಳು ನೆನಪಿಗೆ ಬರುತ್ತಿವೆ. ಈಕೆ ಈ ಸಾಲುಗಳನ್ನು ಬರೆದು ಶತಮಾನಗಳೇ ಕಳೆದಿದ್ದರೂ, ನಮ್ಮ ಸಮಾಜ ಇಂದಿಗೂ "ಕಣ್ಣು ಕಾಣದ ಗಾವಿಲ"ರಿಂದಲೇ ತುಂಬಿ ಹೋಗಿರುವಂತೆ ಕಾಣುತ್ತಿದೆ.

ಗೃಹ ಇಲಾಖೆಯ ಅಂಕಿ-ಅಂಶ ಇದಕ್ಕೆ ಸ್ಪಷ್ಟ ನಿದರ್ಶನ. ರಾಜ್ಯದಲ್ಲಿ ಕಳೆದೆರಡು ತಿಂಗಳಲ್ಲಿ 799 ಲೈಂಗಿಕ ಕಿರುಕುಳ ಪ್ರಕರಣ ವರದಿಯಾಗಿದೆ. ಗೃಹ ಇಲಾಖೆ ನೀಡುವ ಅಂಕಿ- ಅಂಶಗಳ ಪ್ರಕಾರ ಫೆಬ್ರವರಿ 20 ನೇ ತಾರೀಕಿನವರೆಗೆ ರಾಜ್ಯದ ವಿವಿಧ ಪೊಲೀಸ್ ಠಾಣೆಯಲ್ಲಿ 799 ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಕೇವಲ 87 ಆರೋಪಿಗಳ ಬಂಧನವಾಗಿದ...