Bangalore, ಮೇ 18 -- ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಶನಿವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 30ನೇ ಎಪಿಸೋಡ್ ಕಥೆ ಹೀಗಿದೆ. ಪೊಲೀಸರಿಗೆ ಫೋನ್ ಮಾಡಿದವರು ಯಾರು ಎಂದು ತಿಳಿಯಲು ಭದ್ರ, ಗೋವಿಂದ ಬಹಳ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಪರಿಚಯಸ್ಥ ಕಾನ್ಸ್ಟೆಬಲ್ ಒಬ್ಬರಿಂದ ಈ ಮದುವೆ ನಿಲ್ಲಿಸಲು ನನ್ನ ಮಗಳು ವಿದ್ಯಾಳೇ ಕಾರಣ ಎಂಬ ಸತ್ಯ ಚೆಲುವನಿಗೆ ಗೊತ್ತಾಗುತ್ತದೆ. ಭಯ ಹಾಗೂ ಕೋಪದಿಂದ ಚೆಲುವ ಮನೆಗೆ ಬರುತ್ತಾನೆ. ಮದುವೆ ಮುರಿದ ಖುಷಿಗೆ ವಿದ್ಯಾ ಮತ್ತೆ ಟ್ಯೂಷನ್ ಹೊರಡಲು ಸಿದ್ಧಳಾಗುತ್ತಾಳೆ. ಚೆಲುವ ಸಿಟ್ಟಿನಿಂದ ವಿದ್ಯಾಳನ್ನು ಮನೆ ಒಳಗೆ ಎಳೆದೊಯ್ಯುತ್ತಾನೆ.
ವಿದ್ಯಾಳೊಂದಿಗೆ ಚೆಲುವ ಈ ರೀತಿ ವರ್ತಿಸುತ್ತಿರುವುದಕ್ಕೆ ಕಾಳವ್ವ ಹಾಗೂ ರತ್ನ ಬೇಸರಗೊಳ್ಳುತ್ತಾರೆ. ಆದರೆ ಪೊಲೀಸರಿಗೆ ಕರೆ ಮಾಡಿ ಮದುವೆ ನಿಲ್ಲಿಸುವಂತೆ ಮಾಡಿದ್ದು ವಿದ್ಯಾಳೇ ಎಂದು ತಿಳಿದು ಇಬ್ಬರೂ ಗಾಬರಿಯಾಗುತ್ತಾರೆ. ದೇವರಂಥ ಗೌಡರು ಜೈಲಿಗೆ ಹೋಗುವಂತೆ ಮಾಡಿಬಿಟ್ಟೆಯಲ್ಲಾ ಎಂದು ಮಗಳಿಗೆ ಚೆಲುವ ಹ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.