Bangalore, ಮೇ 2 -- ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಗುರುವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 14ನೇ ಎಪಿಸೋಡ್ ಕಥೆ ಹೀಗಿದೆ. ಅಪ್ಪನ ಖುಷಿಗೆ ಭದ್ರ ಹೆಣ್ಣು ನೋಡಲು ಹೋಗುತ್ತಾನೆ, ಅಪ್ಪನ ತೀರ್ಮಾನವೇ ನನ್ನ ತೀರ್ಮಾನ ಎನ್ನುತ್ತಾನೆ. ಸುತ್ತಮುತ್ತಲಿನ ಊರಿನಲ್ಲಿ ನನ್ನ ಅಪ್ಪ ಒಳ್ಳೆ ಹೆಸರು ಮಾಡಿದ್ದಾರೆ, ಅವರ ವಿರುದ್ಧ ಹೋಗಿ ಕೆಟ್ಟ ಹೆಸರು ತರುವುದಿಲ್ಲ ಎಂದು ಕ್ವಾಟ್ಲೆ ಬಳಿ ಭದ್ರ ಹೇಳುವುದನ್ನು ಶಿವರಾಮ ಕೇಳಿಸಿಕೊಳ್ಳುತ್ತಾನೆ. ಮಗನಿಗೆ ತನ್ನ ಮೇಲೆ ಇರುವ ಗೌರವ ನೋಡಿ ಶಿವರಾಮೇಗೌಡ ಭಾವುಕನಾಗುತ್ತಾನೆ. ಮತ್ತೊಂದೆಡೆ 3 ಲಕ್ಷ ರೂ ಸಾಲ ತೀರಿಸಲು ಸಮಯ ಕೊಡುವಂತೆ ಭದ್ರನ ಬಳಿ ವಿದ್ಯಾ ಮನವಿ ಮಾಡುತ್ತಾಳೆ.
ವಿದ್ಯಾ ತರಗತಿಯಲ್ಲಿರುವಾಗ ಅವಳನ್ನು ಪ್ರಿನ್ಸಿಪಾಲ್ ಬರಲು ಹೇಳುತ್ತಾರೆ. ನಾನು ಒಂದು ಟ್ರಸ್ಟ್ನವರ ಜೊತೆ ನಿನ್ನ ಬಗ್ಗೆ ಮಾತನಾಡಿದ್ದೆ, ನೀನು ಸ್ಕಾಲರ್ಶಿಪ್ಗೆ ಆಯ್ಕೆಯಾಗಿದ್ದೀಯ, ಅಷ್ಟೇ ಅಲ್ಲ, ನೀನು ಚೆನ್ನಾಗಿ ಓದಿ ಒಳ್ಳೆ ಅಂಕಗಳನ್ನು ತೆಗೆದರೆ ಅವರು ಪ್ರೋತ್ಸ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.