ಭಾರತ, ಮೇ 19 -- ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಭಾನುವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 31ನೇ ಎಪಿಸೋಡ್ ಕಥೆ ಹೀಗಿದೆ. ಹೇಗಾದರೂ ಮಾಡಿ ಈ ಸಂಬಂಧ ಉಳಿಸಿಕೊಳ್ಳಲೇಬೇಕೆಂಬ ಹಟದಿಂದ ಚೆಲುವ, ಗೌಡರ ಮನೆಗೆ ಬಂದು ಮದುವೆ ಬಗ್ಗೆ ಮಾತನಾಡುತ್ತಾನೆ. ಆದರೆ ಶಿವರಾಮೇಗೌಡನ ತಾಯಿ ಅವನಿಗೆ ಅವಮಾನ ಮಾಡುತ್ತಾಳೆ. ಈ ಸಂಬಂಧ ಬೇಡವೆಂದು ತಿಳಿಸಿ, ಅವರಿಗೆ ಕೊಟ್ಟಿದ್ದ ಒಡವೆ, ಬಟ್ಟೆ, ದುಡ್ಡನ್ನು ವಾಪಸ್ ತೆಗೆದುಕೊಂಡು ಬಾ ಎಂದು ಈಶ್ವರಿಗೆ ಹೇಳುತ್ತಾಳೆ. ವಿದ್ಯಾ ಖುಷಿಯಿಂದಲೇ ಎಲ್ಲಾ ವಸ್ತುಗಳನ್ನೂ ವಾಪಸ್ ಕೊಡುತ್ತಾಳೆ. ಮಗಳ ಮೇಲಿನ ಕೋಪಕ್ಕೆ ಚೆಲುವ ಅವಳನ್ನು ರೂಮ್ನಲ್ಲಿ ಕೂಡಿಹಾಕುತ್ತಾನೆ.
ಭದ್ರ, ಕ್ವಾಟ್ಲೆ, ಗೋವಿಂದ ಮೂವರೂ ಶಿವರಾಮೇಗೌಡನನ್ನು ಮಾತನಾಡಿಸಿಕೊಂಡು ಮನೆಗೆ ಬರುತ್ತಾರೆ. ಊರಿಗೆ ಹೊರಡುವ ಮುನ್ನ ಮತ್ತೊಮ್ಮೆ ಮದುವೆ ಬಗ್ಗೆ ಕೇಳೋಣ ಎಂದು ಚೆಲುವ ತೋಟದ ಮನೆಯಲ್ಲಿ ಭದ್ರನನ್ನು ಭೇಟಿ ಆಗುತ್ತಾನೆ. ಗೌಡರು ಹೇಗಿದ್ದಾರೆ ಎಂದು ಕೇಳುತ್ತಾನೆ. ಅಪ್ಪ ಜೈಲಿನಲ್ಲಿ ಸುಖವಾಗಿಲ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.