ಭಾರತ, ಮೇ 22 -- ಬೇಸಿಗೆ ರಜೆ ಮೊನ್ನೆಯಷ್ಟೇ ಆರಂಭವಾಗಿದೆ ಎನ್ನಿಸುತ್ತಿದ್ದರೂ ಈಗಾಗಲೇ ರಜೆ ಮುಕ್ತಾಯದ ಹಂತಕ್ಕೆ ಬಂದಿದೆ. ಇನ್ನೇನು ವಾರ ಕಳೆದರೆ ಮಕ್ಕಳಿಗೆ ಶಾಲೆ ಪುನಾರಂಭವಾಗುತ್ತದೆ. ಆದರೆ ಮಕ್ಕಳಿನ್ನೂ ಬೇಸಿಗೆ ರಜೆಯ ಮೂಡ್ನಲ್ಲೇ ಇದ್ದಾರೆ. ಶಾಲೆಗೆ ಹೋಗಲು ಮಕ್ಕಳಿಗೆ ಪುಸ್ತಕ, ಬ್ಯಾಗ್, ಯೂನಿಫಾರಂ ತಂದರೆ ಸಾಲುವುದಿಲ್ಲ. ಅವರನ್ನು ಮಾನಸಿಕವಾಗಿ ಸಿದ್ಧಗೊಳಿಸುವುದು ಮುಖ್ಯವಾಗುತ್ತದೆ.
ದೀರ್ಘ ರಜೆ ಎಂದಾಗ ಮಕ್ಕಳು ಸಾಮಾನ್ಯವಾಗಿ ಶಾಲೆಯ ಹೋಗುವಾಗಿನ ಶಿಸ್ತನ್ನು ಮರೆತು ಬಿಟ್ಟಿರುತ್ತಾರೆ. ಆ ಶಿಸ್ತನ್ನು ಜೂನ್ 1 ಅಥವಾ 2 ರಂದು ಆರಂಭವಾಗುವ ಶಾಲೆಯ ಮೊದಲ ದಿನದಿಂದಲೇ ಕಲಿಸುವುದು ಕಷ್ಟವಾಗಬಹುದು, ಅದಕ್ಕಾಗಿ ಈಗಿನಿಂದಲೇ ಅವರನ್ನು ಶಾಲೆಗೆ ಹೋಗಲು ಮಾನಸಿಕವಾಗಿ, ದೈಹಿಕವಾಗಿ ಸಿದ್ಧರಾಗುವಂತೆ ಮಾಡಿ. ಮಕ್ಕಳನ್ನು ಶಾಲೆಗೆ ಸಿದ್ಧ ಮಾಡುವಲ್ಲಿ ಪೋಷಕರು ಅನುಸರಿಸಬೇಕಾದ ಕೆಲವು ಮೂಲ ನಿಯಮಗಳಿವು.
ರಜೆಯ ಕಾರಣದಿಂದ ಮಕ್ಕಳು ಪ್ರತಿದಿನ ತಡವಾಗಿ ಎದ್ದು ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದರೆ ಇನ್ನೇನು ಶಾಲೆ ಶುರುವಾಗುವ ಕಾರಣ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.