ಭಾರತ, ಮಾರ್ಚ್ 24 -- ವಯಸ್ಸು 43 ಆದರೂ ಸಿಎಸ್ಕೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಲ್ಲಿನ ಕ್ರಿಕೆಟ್ ಚಾಣಾಕ್ಷತೆಗೆ ಎಂತಹವರೂ ಬೆರಗಾಗುತ್ತಾರೆ ಎನ್ನುವುದು ಮತ್ತೆ ಸಾಬೀತಾಗಿದೆ. ಧೋನಿ ರಿವ್ಯೂ ಪಡೆದರೆಂದರೆ ಬ್ಯಾಟರ್ ಮೈದಾನ ತೊರೆಯುವುದೇ ಉತ್ತಮ ಎಂದರ್ಥ. ಸಿಎಸ್ಕೆ ತಂಡದಲ್ಲಿ ಎಂಎಸ್ ಧೋನಿ ಹೆಸರಿನ ಪಕ್ಕದಲ್ಲಿ 'ನಾಯಕ' ಇಲ್ಲದಿರಬಹುದು, ಆದರೆ ಅವರ ಪ್ರಭಾವವು ಎಂದಿನಂತೆ ಪ್ರಬಲವಾಗಿದೆ. ಸಿಎಸ್ಕೆ ತಂಡದ ನಾಯಕತ್ವ ಯಾರೇ ವಹಿಸಿಕೊಳ್ಳಬಹುದು, ಆದರೆ ರಿವ್ಯೂಗಳಿಗೆ ಸ್ಟಂಪ್ಗಳ ಹಿಂದಿರುವ ಧೋನಿ ನಿರ್ಧಾರ ಪ್ರಮುಖ ಪಾತ್ರವಹಿಸಲಿದೆ ಎನ್ನುವುದು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸಾಬೀತಾಗಿದೆ.
ಚೆನ್ನೈನ ಚೆಪಾಕ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಋತುರಾಜ್ ಗಾಯಕ್ವಾಡ್ ನೇತೃತ್ವದ ಚೆನ್ನೈ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಇನ್ನಿಂಗ್ಸ್ ಆರಂಭಿಸಿದ ಮುಂಬೈ, ಸಿಎಸ್ಕೆ ಬೌಲರ್ಗಳ ದಾಳಿಗೆ ತತ್ತರಿಸಿತು. ಪರಿಣಾಮ ಎಂಐ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 155 ರನ್ ಗಳಿಸ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.