ಭಾರತ, ಮಾರ್ಚ್ 24 -- ವಯಸ್ಸು 43 ಆದರೂ ಸಿಎಸ್​ಕೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಲ್ಲಿನ ಕ್ರಿಕೆಟ್ ಚಾಣಾಕ್ಷತೆಗೆ ಎಂತಹವರೂ ಬೆರಗಾಗುತ್ತಾರೆ ಎನ್ನುವುದು ಮತ್ತೆ ಸಾಬೀತಾಗಿದೆ. ಧೋನಿ ರಿವ್ಯೂ ಪಡೆದರೆಂದರೆ ಬ್ಯಾಟರ್​ ಮೈದಾನ ತೊರೆಯುವುದೇ ಉತ್ತಮ ಎಂದರ್ಥ. ಸಿಎಸ್​​ಕೆ ತಂಡದಲ್ಲಿ ಎಂಎಸ್ ಧೋನಿ ಹೆಸರಿನ ಪಕ್ಕದಲ್ಲಿ 'ನಾಯಕ' ಇಲ್ಲದಿರಬಹುದು, ಆದರೆ ಅವರ ಪ್ರಭಾವವು ಎಂದಿನಂತೆ ಪ್ರಬಲವಾಗಿದೆ. ಸಿಎಸ್​ಕೆ ತಂಡದ ನಾಯಕತ್ವ ಯಾರೇ ವಹಿಸಿಕೊಳ್ಳಬಹುದು, ಆದರೆ ರಿವ್ಯೂಗಳಿಗೆ ಸ್ಟಂಪ್​ಗಳ ಹಿಂದಿರುವ ಧೋನಿ ನಿರ್ಧಾರ ಪ್ರಮುಖ ಪಾತ್ರವಹಿಸಲಿದೆ ಎನ್ನುವುದು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸಾಬೀತಾಗಿದೆ.

ಚೆನ್ನೈನ ಚೆಪಾಕ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಋತುರಾಜ್ ಗಾಯಕ್ವಾಡ್ ನೇತೃತ್ವದ ಚೆನ್ನೈ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಇನ್ನಿಂಗ್ಸ್​ ಆರಂಭಿಸಿದ ಮುಂಬೈ, ಸಿಎಸ್​ಕೆ ಬೌಲರ್​ಗಳ ದಾಳಿಗೆ ತತ್ತರಿಸಿತು. ಪರಿಣಾಮ ಎಂಐ 20 ಓವರ್​​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 155 ರನ್ ಗಳಿಸ...