ಭಾರತ, ಏಪ್ರಿಲ್ 6 -- ಬಾಲಿವುಡ್ನ ಫೇಮಸ್ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮಗಳು ದುವಾ ಪಡುಕೋಣೆ ಸಿಂಗ್ ಜನಿಸಿದ ನಂತರ ಇದೇ ಮೊದಲ ಬಾರಿಗೆ ಜಾಹೀರಾತೊಂದಕ್ಕೆ ತೆರೆ ಮೇಲೆ ಒಟ್ಟಾಗಿ ಕಾಣಿಸಿಕೊಂಡಿದೆ. ಹೊಸ ಏರ್ ಕಂಡೀಷನ್ ಜಾಹೀರಾತಿನಲ್ಲಿ ದೀಪಿಕಾ ಹಾಗೂ ರಣವೀರ್ ಒಟ್ಟಾಗಿ ನಟಿಸುತ್ತಿದ್ದಾರೆ. ಈ ಜಾಹೀರಾತಿನ ತುಣುಕನ್ನು ಇನ್ಸ್ಟಾಗ್ರಾಂ ಹಂಚಿಕೊಂಡಿದೆ ಏರ್ ಕಂಡೀಷನ್ ಬ್ರಾಂಡ್.
ಈ ಜಾಹೀರಾತಿನ ವಿಡಿಯೊ ಆರಂಭವಾದಾಗ ಪಾರ್ಟಿಗೆ ಬಂದಿರುವ ಗೆಸ್ಟ್ಗಳು ದೀಪಿಕಾ ಮಾಡಿರುವ ಅಡುಗೆ ಹಾಗೂ ಅವಳ ಕಥೆಗಳಿಗಿಂತ ಏರ್ ಕಂಡೀಷನರ್ ಅನ್ನು ಎಷ್ಟು ಎಂಜಾಯ್ ಮಾಡಿದ್ರು ಎಂಬುದನ್ನು ರಣವೀರ್ ಹೇಳುತ್ತಿರುತ್ತಾರೆ. ಆಗ ದೀಪಿಕಾ ರಣವೀರ್ ಮೇಲೆ ಕೋಪ ಮಾಡಿಕೊಳ್ಳುತ್ತಾರೆ. ಆಗ ರಣವೀರ್ ಮುದ್ದಾಗಿ ಒಂದೆರಡು ಲೈನ್ ಹೇಳುತ್ತಾರೆ. ಆಗ ದೀಪಿಕಾ ರಣವೀರ್ಗೆ ಮುತ್ತು ಕೊಡುತ್ತಾರೆ. ಈ ಸುಂದರ ದೃಶ್ಯವಿರುವ ಜಾಹೀರಾತಿನ ವಿಡಿಯೊಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಕಷ್ಟು ಅಭಿಮಾನಿಗಳು ಈ ವಿಡಿಯೊಗೆ ಕಾಮೆಂಟ್ ಮಾಡುವ ಮೂ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.