ಭಾರತ, ಮೇ 26 -- ಮಂಡ್ಯ: ಸ್ವರ್ಣಸಂದ್ರ ಸಮೀಪ ಟ್ರಾಫಿಕ್ ಪೊಲೀಸ್ ತಪಾಸಣೆ ವೇಳೆ ಪೊಲೀಸರ ನಿರ್ಲಕ್ಷ್ಯದ ಕಾರಣದಿಂದಾಗಿ 3 ವರ್ಷದ ಮಗು ಬೈಕ್ನಿಂದ ಕೆಳಗೆ ಬಿದ್ದು ಅಪಘಾತಕ್ಕೊಳಗಾಗಿ ದುರ್ಮರಣಕ್ಕೀಡಾದ ಹೃದಯ ವಿದ್ರಾವಕ ಘಟನೆ ಮಂಡ್ಯದಿಂದ ವರದಿಯಾಗಿದೆ. ಇದರ ಬೆನ್ನಿಗೆ ಈ ಘಟನೆಯಲ್ಲಿ ಬೇವಜಾಬ್ದಾರಿ ವರ್ತನೆ ತೋರಿದ ಮೂವರು ಪೊಲೀಸ್ ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಾನತುಗೊಳಿಸಿದ ಘಟನೆಯೂ ನಡೆದಿದೆ. ವಾಹನ ತಪಾಸಣೆ ಕರ್ತವ್ಯದಲ್ಲಿದ್ದ ಪೊಲೀಸರ ಹೊಣೆಗೇಡಿತನದ ವರ್ತನೆ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ರಾಜಕೀಯವಾಗಿ ಕೂಡ ಗಮನಸೆಳೆದಿದೆ.
ಮಂಡ್ಯದ ಸ್ವರ್ಣಸಂದ್ರ ಬಳಿ ಸಂಚಾರ ಪೊಲೀಸರು ಹೆಲ್ಮೆಟ್ ತಪಾಸಣೆ ನಡೆಸುತ್ತಿದ್ದಾಗ, ಬೈಕ್ನಲ್ಲಿ ಬರುತ್ತಿದ್ದ ದಂಪತಿಯನ್ನು ತಡೆದಿದ್ದಾರೆ. ಆಗ ಬೈಕ್ ಸವಾರ ಏಕಾಕಿಯಾಗಿ ಬ್ರೇಕ್ ಹಾಕಿದ್ದು, ಎಲ್ಲರೂ ಆಯತಪ್ಪಿ ಕೆಳಬಿದ್ದ ವೇಳೆ 3 ವರ್ಷದ ಮಗು ರಸ್ತೆಗೆ ಬಿದ್ದ ವೇಳೆ ಸಂಭವಿಸಿದ ಅಪಘಾತಕ್ಕೆ ಬಲಿಯಾಗಿದೆ. ಇದರಿಂದ ನೊಂದ ಕುಟುಂಬದವರು ಮಗುವಿನ ಶವ ಹಿಡಿದುಕೊಂಡೇ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.