ಭಾರತ, ಮೇ 10 -- ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಈ ಬಾರಿ ಹಲವು ವಿದಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನವರಾದ ಯಶ್ವಿತಾ ರೆಡ್ಡಿ ಕೆಬಿ, ರಾಜ್ಯವೇ ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ. ಮಧುಗಿರಿಯ ಚಿರೆಗ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿನಿಯಾಗಿರುವ ಇವರು, ಎಲ್ಲಾ ವಿಷಯಗಳಲ್ಲಿಯೂ ಪೂರ್ಣ ಅಂಕಗಳನ್ನು ಪಡೆದಿದ್ದಾರೆ. ತಮ್ಮ ಶೈಕ್ಷಣಿಕ ಸಾಧನೆಯ ಕುರಿತು ಎಚ್ಟಿ ಕನ್ನಡದೊಂದಿಗೆ ಮುಕ್ತವಾಗಿ ಮಾತನಾಡಿರುವ ಅವರು, ಓದಿನ ಕುರಿತಾಗಿಯೂ ಸಲಹೆ ಹಂಚಿಕೊಂಡಿದ್ದಾರೆ.
ನಿದ್ದೆಗೆ ಯಾವುದೇ ಸಮಸ್ಯೆಯಾಗದಂತೆ, ಸುಲಭವಾಗಿ ನಿಭಾಯಿಸುವಂತೆ ಓದಿನ ವೇಳಾಪಟ್ಟಿ ಹಾಕಿಕೊಂಡಿದ್ದೆ. ನನಗೆ ಭಾಷಾ ವಿಷಯಗಳು ಸ್ವಲ್ಪ ಸುಲಭವಾಗುತ್ತಿತ್ತು. ದಿನದ ಓದಿಗೆ ಹೋಲಿಸಿದ್ರೆ ರಾತ್ರಿಯ ಓದು ಇಷ್ಟವಾಗುತ್ತಿತ್ತು. ಹೀಗಾಗಿ ರಾತ್ರಿ ಗಣಿತ, ವಿಜ್ಞಾನದಂಥ ವಿಷಯ ಓದುತ್ತಿದ್ದೆ. ಬೆಳಗ್ಗಿನ ಸಮಯದಲ್ಲಿ ಭಾಷಾ ವಿಷಯಗಳನ್ನು ಓದುತ್ತಿದ್ದೆ. ಏಕೆಂದರೆ ಅದು ನನಗೆ ಸುಲಭವಾಗುತ್ತ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.