ಭಾರತ, ಮೇ 25 -- ಪಂಪ್ವೆಲ್ನಲ್ಲಿ ಹೊಳೆಯಂತಾದ ರಸ್ತೆ: ಮಂಗಳೂರು ಪಂಪ್ವೆಲ್ ಜಂಕ್ಷನ್ ಮಧ್ಯಾಹ್ನ ಸುರಿದ ಮಳೆಗೆ ಹೊಳೆಯಂತಾಗಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಸುಮಾರು ಎರಡು ಗಂಟೆ ಸುರಿದ ಮಳೆಗೆ ರಾಜಾಕಾಲುವೆ ತುಂಬಿ ಹರಿದು, ಫ್ಲೈಓವರ್ ಕೆಳಭಾಗ ಸಂಪೂರ್ಣ ಜಲಾವೃತಗೊಂಡಿತು.
ಉರುಳಿದ ಮರ, ಹಲವೆಡೆ ಅನಾಹುತ: ಮಂಗಳೂರು ಲೇಡಿಹಿಲ್ ಬಳಿ ಮರವೊಂದು ಉರುಳಿಬಿದ್ದಿದೆ. ಚಿಲಿಂಬಿಯಲ್ಲಿ ನಾಲ್ಕು ಮರಗಳು ಉರುಳಿಬಿದ್ದಿವೆ. ಆಟೊ ಕಾರು, ಬಸ್ಸು ಸೇರಿದಂತೆ ನಾಲ್ಕು ವಾಹನಗಳು ಜಖಂಗೊಂಡಿವೆ.
ಕಡಬದಲ್ಲಿ ಕಾರಿನ ಮೇಲೆ ಬಿದ್ದ ಮರ, ನಾಲ್ವರಿಗೆ ಗಾಯ: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಸಮೀಪ ನೂಜಿಬಾಳ್ತಿಲ ಎಂಬಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಮರ ಬಿದ್ದು, ಮಗು ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ. ಕುಕ್ಕೆಸುಬ್ರಹ್ಮಣ್ಯದಿಂದ ಇಚ್ಲಂಪಾಡಿ ಮೂಲಕ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕಾರಿನ ಮೇಲೆ ನೂಜಿಬಾಳ್ತಿಲ ಎಂಬಲ್ಲಿ ಮರವೊಂದು ಮುರಿದುಬಿದ್ದಿದೆ. ಭಾರಿ ಗಾಳಿ ಮಳೆ ಸುರಿಯುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಚಾಲಕ, ಇಬ್ಬರ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.