ಭಾರತ, ಮೇ 24 -- ಎಲಾನ್ ಮಸ್ಕ್ ಒಡೆತನದ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಎಕ್ಸ್ (ಟ್ವಿಟರ್) ಇಂದು ಕೂಡ (ಮೇ 24 ಶನಿವಾರ) ಸರ್ವರ್​ ಡೌನ್​ ಆಗಿದ್ದು, ಬಳಕೆದಾರರು ಸಮಸ್ಯೆ ಎದುರಿಸಿದ್ದಾರೆ. ಮೇ 23ರ ಶುಕ್ರವಾರವೂ ಸರ್ವರ್ ಡೌನ್ ಆಗಿತ್ತು. ಬಳಕೆದಾರರು ತಮ್ಮ ಪ್ಲಾಟ್‌ಫಾರ್ಮ್ ಪ್ರವೇಶಿಸಲು ಅಥವಾ ಅದರಲ್ಲಿ ಪೋಸ್ಟ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ವರದಿಯಾಗಿದೆ. ಅಪ್ಲಿಕೇಶನ್-ವೆಬ್‌ಸೈಟ್ ಸಾವಿರಾರು ಭಾರತೀಯ ಬಳಕೆದಾರರಿಗೆ ಮತ್ತು ಪ್ರಪಂಚದ ಇತರ ಭಾಗಗಳಲ್ಲಿಯೂ ಕಾರ್ಯನಿರ್ವಹಿಸುತ್ತಿಲ್ಲ ಎಂದು ವರದಿಯಾಗಿದೆ. 'ಎಕ್ಸ್'​ ಸೇವೆ ಸ್ಥಗಿತವಾಗಿದ್ದು, ಇದೇ ಮೊದಲಲ್ಲ. ಅಲ್ಲದೆ, ಈ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಅದೂ ಅಲ್ಲದೆ, ಅದರ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.

Published by HT Digital Content Services with permission from HT Kannada....