Bengaluru, ಮೇ 10 -- ನವದೆಹಲಿ: ಪಾಕಿಸ್ತಾನದ ರಾವಲ್ಪಿಂಡಿಯ ನೂರ್ ಖಾನ್ ವಾಯುನೆಲೆಯ ಬಳಿ ಮತ್ತು ಲಾಹೋರ್ನ ವಿವಿಧ ಸ್ಥಳಗಳಲ್ಲಿ ಅನೇಕ ಸ್ಫೋಟಗಳು ಕೇಳಿಬಂದಿವೆ ಎಂದು ಪಾಕಿಸ್ತಾನದ ಮಾಧ್ಯಮ ಚಾನೆಲ್ ಸಮಾ ಟಿವಿ ಶುಕ್ರವಾರ ರಾತ್ರಿ ವರದಿ ಮಾಡಿದೆ. ವರದಿಯು ಹೆಚ್ಚಿನ ವಿವರಗಳನ್ನು ನೀಡಿಲ್ಲ. ಸ್ಫೋಟಕ್ಕೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ಪಾಕಿಸ್ತಾನ ವಾಯುಪಡೆಯ ನೆಲೆ, ನೂರ್ ಖಾನ್ ಪಂಜಾಬ್ ಪ್ರಾಂತ್ಯದ ರಾವಲ್ಪಿಂಡಿಯ ಚಕ್ಲಾಲಾದಲ್ಲಿದೆ.
ಕಳೆದ ಕೆಲವು ದಿನಗಳಿಂದ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗಿದ್ದು, ಉಗ್ರರ ನಿಗ್ರಹಕ್ಕೆ ಭಾರತೀಯ ಸೇನೆ ಕ್ರಮ ಕೈಗೊಂಡಿದೆ. ಭಾರತವು ಮಂಗಳವಾರ ರಾತ್ರಿ ತನ್ನ ಆಪರೇಷನ್ ಸಿಂದೂರ್ ಅನ್ನು ಪ್ರಾರಂಭಿಸಿದ್ದು, ಪಾಕಿಸ್ತಾನದ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸಿದೆ. ಮೇ 7 ರಂದು ಮುಂಜಾನೆ 1:05 ರಿಂದ 1:30 ರವರೆಗೆ ಭಾರತೀಯ ಸೇನೆ ಮತ್ತು ವಾಯುಪಡೆ ಜಂಟಿಯಾಗಿ ಈ ದಾಳಿಯನ್ನು ನಡೆಸಿವೆ.
26 ಜನರ ಸಾವಿಗೆ ಕಾರಣವಾದ ಕಾಶ್ಮೀರದ ಪಹಲ್ಗಾಮ್ ದಾಳಿಯ ನಂತರ ಪಾಕ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.