ಭಾರತ, ಮೇ 15 -- ನವದೆಹಲಿ: ಗಡಿಭಾಗದಲ್ಲಿ ಉದ್ವಿಗ್ನತೆ ಶಮನಗೊಳಿಸುವುದಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಭಾರತ ಮತ್ತು ಪಾಕಿಸ್ತಾನ ಸೇನೆಗಳು ತೀರ್ಮಾನಿಸಿವೆ. ಎರಡೂ ರಾಷ್ಟ್ರಗಳ ಡೈರೆಕ್ಟರ್ ಜನರಲ್ ಆಫ್ ಮಿಲಿಟರಿ ಆಪರೇಷನ್ಸ್ (ಡಿಜಿಎಂಒ) ಮಟ್ಟದ ಮಾತುಕತೆ ಮೇ 10 ರಂದು ನಡೆದ ವೇಳೆ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಭಾರತೀಯ ಸೇನೆ ಗುರುವಾರ (ಮೇ 15) ತಿಳಿಸಿದೆ. "ಮೇ 10 ರಂದು ಭಾರತ ಮತ್ತು ಪಾಕಿಸ್ತಾನದ ಡಿಜಿಎಂಒಗಳ ನಡುವೆ ತಲುಪಿದ ತಿಳುವಳಿಕೆಯ ಪ್ರಕಾರ, ಜಾಗರೂಕತೆಯ ಮಟ್ಟವನ್ನು ಕಡಿಮೆ ಮಾಡಲು ಹಾಗೂ ಆತ್ಮವಿಶ್ವಾಸ-ನಿರ್ಮಾಣ ಕ್ರಮಗಳನ್ನು ಮುಂದುವರಿಸಲು ನಿರ್ಧರಿಸಲಾಗಿದೆ" ಎಂದು ಭಾರತೀಯ ಸೇನೆ ಹೇಳಿಕೆಯಲ್ಲಿ ತಿಳಿಸಿದೆ.
ಭಾರತ ಮತ್ತು ಪಾಕಿಸ್ತಾನ ಪರಸ್ಪರರ ನಡುವೆ ಎಲ್ಲ ಮಿಲಿಟರಿ ಕ್ರಮಗಳನ್ನು ತಡೆಯುವುದಕ್ಕೆ ಅಗತ್ಯವಾದ ತಿಳಿವಳಿಕೆಗೆ ಬಂದ ನಂತರ ಕದನ ವಿರಾಮ ತಿಳಿವಳಿಕೆಯನ್ನು ಎತ್ತಿಹಿಡಿಯಲು ತೀರ್ಮಾನಿಸಲಾಗಿದೆ ಎಂದು ಸೇನೆ ತಿಳಿಸಿದೆ. ಇದರೊಂದಿಗೆ ಎರಡು ಪರಮಾಣು ಸಶಸ್ತ್ರ ದೇಶಗಳ ನಡುವಿನ ಬಿಕ್ಕಟ್ಟು...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.