ಭಾರತ, ಫೆಬ್ರವರಿ 28 -- ಭಾರತ ಮತ್ತು ಪಾಕಿಸ್ತಾನ ನಡುವೆ ಕೊನೆಯದಾಗಿ ದ್ವಿಪಕ್ಷೀಯ ಸರಣಿ ನಡೆದಿದ್ದು 2012-13ರಲ್ಲಿ. ಅಂದು ಜರುಗಿದ್ದ ಏಕದಿನ ಸರಣಿಯಲ್ಲಿ ಪಾಕಿಸ್ತಾನ 2-1ರಲ್ಲಿ ಜಯದ ನಗೆ ಬೀರಿತ್ತು. ಅದು ಕೂಡ ಭಾರತದಲ್ಲೇ ಜರುಗಿದ್ದ ಸರಣಿ ಇದಾಗಿತ್ತು. ಭಾರತ-ಪಾಕಿಸ್ತಾನ ನಡುವೆ ನಿರಂತರವಾಗಿ ಹೆಚ್ಚುತ್ತಿರುವ ರಾಜಕೀಯ ಉದ್ವಿಗ್ನತೆಯಿಂದ ದ್ವಿಪಕ್ಷೀಯ ಸರಣಿಗಳು ಸ್ಥಗಿತಗೊಂಡಿವೆ. ಅಂದಿನಿಂದ ಕೇವಲ ಐಸಿಸಿ ಟೂರ್ನಿಗಳು, ಏಷ್ಯಾಕಪ್ ಟೂರ್ನಿಗಳಲ್ಲಿ ಮಾತ್ರ ಉಭಯ ತಂಡಗಳು ಮುಖಾಮುಖಿ ಆಗುತ್ತಿದೆ. 1952-53ರಲ್ಲಿ ಮೊದಲ ಬಾರಿಗೆ 2 ದೇಶಗಳ ನಡುವೆ ದ್ವಿಪಕ್ಷೀಯ ಸರಣಿ ಆಯೋಜನೆಗೊಂಡಿತ್ತು. ಇದೀಗ ದಶಕದ ನಂತದ ಉಭಯ ದೇಶಗಳ ಮಧ್ಯೆ ಸರಣಿ ಆಯೋಜನೆಗೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ವಿಶೇಷ ಸಲಹೆಯೊಂದರ ಮೂಲಕ ಒತ್ತಾಯಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಸರಣಿ ಆಯೋಜನೆಗೆ ಹಲವು ದೇಶಗಳು ಮುಂದೆ ಬಂದಿವೆ. ಇದಕ್ಕೆ ಪಾಕಿಸ್ತಾನ ಸಮ್ಮತಿ ಸೂಚಿಸಿದೆಯಾದರೂ ಭಾರತ ಇದಕ್ಕೆ ಆಸಕ್ತಿ ತೋರಿಲ್ಲ. ಹೀಗಿರುವಾಗ ಸುನಿಲ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.