ಭಾರತ, ಫೆಬ್ರವರಿ 28 -- ಭಾರತ ಮತ್ತು ಪಾಕಿಸ್ತಾನ ನಡುವೆ ಕೊನೆಯದಾಗಿ ದ್ವಿಪಕ್ಷೀಯ ಸರಣಿ ನಡೆದಿದ್ದು 2012-13ರಲ್ಲಿ. ಅಂದು ಜರುಗಿದ್ದ ಏಕದಿನ ಸರಣಿಯಲ್ಲಿ ಪಾಕಿಸ್ತಾನ 2-1ರಲ್ಲಿ ಜಯದ ನಗೆ ಬೀರಿತ್ತು. ಅದು ಕೂಡ ಭಾರತದಲ್ಲೇ ಜರುಗಿದ್ದ ಸರಣಿ ಇದಾಗಿತ್ತು. ಭಾರತ-ಪಾಕಿಸ್ತಾನ ನಡುವೆ ನಿರಂತರವಾಗಿ ಹೆಚ್ಚುತ್ತಿರುವ ರಾಜಕೀಯ ಉದ್ವಿಗ್ನತೆಯಿಂದ ದ್ವಿಪಕ್ಷೀಯ ಸರಣಿಗಳು ಸ್ಥಗಿತಗೊಂಡಿವೆ. ಅಂದಿನಿಂದ ಕೇವಲ ಐಸಿಸಿ ಟೂರ್ನಿಗಳು, ಏಷ್ಯಾಕಪ್ ಟೂರ್ನಿಗಳಲ್ಲಿ ಮಾತ್ರ ಉಭಯ ತಂಡಗಳು ಮುಖಾಮುಖಿ ಆಗುತ್ತಿದೆ. 1952-53ರಲ್ಲಿ ಮೊದಲ ಬಾರಿಗೆ 2 ದೇಶಗಳ ನಡುವೆ ದ್ವಿಪಕ್ಷೀಯ ಸರಣಿ ಆಯೋಜನೆಗೊಂಡಿತ್ತು. ಇದೀಗ ದಶಕದ ನಂತದ ಉಭಯ ದೇಶಗಳ ಮಧ್ಯೆ ಸರಣಿ ಆಯೋಜನೆಗೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್​ ವಿಶೇಷ ಸಲಹೆಯೊಂದರ ಮೂಲಕ ಒತ್ತಾಯಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಸರಣಿ ಆಯೋಜನೆಗೆ ಹಲವು ದೇಶಗಳು ಮುಂದೆ ಬಂದಿವೆ. ಇದಕ್ಕೆ ಪಾಕಿಸ್ತಾನ ಸಮ್ಮತಿ ಸೂಚಿಸಿದೆಯಾದರೂ ಭಾರತ ಇದಕ್ಕೆ ಆಸಕ್ತಿ ತೋರಿಲ್ಲ. ಹೀಗಿರುವಾಗ ಸುನಿಲ್...