ಬೆಂಗಳೂರು, ಮೇ 24 -- ನೀವು ಎಂಜಿನಿಯರಿಂಗ್ ಪದವೀಧರರಾಗಿದ್ದು, ದೇಶಕ್ಕಾಗಿ ಸೇವೆ ಸಲ್ಲಿಸುವ ಇರಾದೆ ಹೊಂದಿದ್ದರೆ ಇಲ್ಲೊಂದು ಅವಕಾಶವಿದೆ. ಭಾರತೀಯ ಸೇನೆಯು 2026ರ ಜನವರಿಯಿಂದ ತಾಂತ್ರಿಕ ಪದವಿ ಕೋರ್ಸ್ (Technical Graduate Course -TGC 142) ಆರಂಭಿಸುವುದಾಗಿ ಘೋಷಿಸಿದೆ. ಹೀಗಾಗಿ ಅರ್ಹ ಅಭ್ಯರ್ಥಿಗಳು ಯಾವುದೇ ಲಿಖಿತ ಪರೀಕ್ಷೆಯ ಅಗತ್ಯವಿಲ್ಲದೆ ಕಾಯಂ ನಿಯೋಜಿತ ಅಧಿಕಾರಿಗಳಾಗಿ (permanent commissioned officers) ಸೇರಲು ಇದೊಂದು ಸುವರ್ಣ ಅವಕಾಶವಾಗಲಿದೆ. ಇಲ್ಲಿ ಸ್ಟೈಫಂಡ್ ಜೊತೆಗೆ ಒಂದು ವರ್ಷದ ಕೋರ್ಸ್ ಪೂರ್ಣಗೊಳಿಸಬೇಕಾಗುತ್ತದೆ. ಈ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅರ್ಹತೆ, ಆಯ್ಕೆ ಪ್ರಕ್ರಿಯೆ, ತರಬೇತಿ ಮತ್ತು ಅರ್ಜಿ ಸಲ್ಲಿಕೆ ವಿಧಾನದ ಕುರಿತ ವಿವರ ಇಲ್ಲಿದೆ.
ತಾಂತ್ರಿಕ ಪದವಿ ಕೋರ್ಸ್ (TGC-142) ಅಡಿಯಲ್ಲಿ ಭಾರತೀಯ ಸೇನಾ ನೇಮಕಾತಿಯಲ್ಲಿ ಅವಿವಾಹಿತ ಪುರುಷ ಎಂಜಿನಿಯರಿಂಗ್ ಪದವೀಧರರು ಭಾಗಿಯಾಗಬಹುದು. ಈ ನೇಮಕಾತಿಯಲ್ಲಿ ಸಾಮಾನ್ಯ ಲಿಖಿತ ಪರೀಕ್ಷೆ ಇರುವುದಿಲ್ಲ. SSB ಸಂದರ್ಶನದ ಮೂಲಕ ಆಫೀಸರ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.