Delhi, ಮಾರ್ಚ್ 26 -- ಭಾರತ ದೇಶಾದ್ಯಂತ ಮೊಬೈಲ್ ಆ್ಯಪ್ಗಳ ಮೂಲಕ ಯುಪಿಐ ವಹಿವಾಟು ನಡೆಯದೇ ಕೆಲ ಹೊತ್ತು ಅಡಚಣೆಯಾಯಿತು. ವಹಿವಾಟು ನಡೆಸುವವರ ಹಣ ವರ್ಗಾವಣೆಯಾಗದೆ ಏನಾಯಿತು ಎಂದು ನೋಡುವ ಸನ್ನಿವೇಶ ನಿರ್ಮಾಣವಾಗಿತ್ತು. ಕೆಲವೇ ಹೊತ್ತಿನಲ್ಲಿ ಸೇವೆಗಳು ಸಹಜ ಸ್ಥಿತಿಗೆ ಮರಳಿ ಜನ ನಿಟ್ಟುಸಿರು ಬಿಟ್ಟರು. ಈ ವೇಳೆ ವಹಿವಾಟುದಾರರೂ ಕೂಡ ಗೊಂದಲಕ್ಕೆ ಒಳಗಾಗಿದ್ದರು. ಎನ್ಸಿಪಿಐ ತಾಂತ್ರಿಕ ಸಮಸ್ಯೆಗಳನ್ನು ಎದುರಿಸಿತು. ಕೆಲವೇ ಕ್ಷಣಗಳಲ್ಲಿ ಉಂಟಾದ ಅಡಚಣೆ ದೇಶದ ಹಲವು ಭಾಗಗಳಲ್ಲಿ ಆಗಿದೆ. ಇದರಿಂದಾಗಿ ಯುಪಿಐ ಸೇವೆ ಭಾಗಶಃ ಕುಸಿಯಿತು. ಈ ಸಮಸ್ಯೆಯನ್ನು ತಾಂತ್ರಿಕ ತಂಡವನ್ನು ಪತ್ತೆ ಹಚ್ಚಿ ಪರಿಹರಿಸಲಾಗಿದೆ. ಜತೆಗೆ ವ್ಯವಸ್ಥೆ ಸ್ಥಿರಗೊಂಡಿದೆ. ಅನಾನುಕೂಲಕ್ಕಾಗಿ ಕ್ಷಮಿಸಿ ಎಂದು ಭಾರತೀಯ ರಾಷ್ಟ್ರೀಯ ಪಾವತಿಗಳ ನಿಗಮವು ಎಕ್ಸ್ನಲ್ಲಿ ಹೇಳಿದೆ.ಡೌನ್ ಡಿಟೆಕ್ಟರ್ ಪ್ರಕಾರ, ಸಂಜೆ 7.50 ರ ವೇಳೆಗೆ ಯುಪಿಐ ಸಮಸ್ಯೆಗೆ ಸಂಬಂಧಿಸಿದ 2,750 ದೂರುಗಳು ಬಂದಿವೆ. ವೆಬ್ಸೈಟ್ ಪ್ರಕಾರ ಗೂಗಲ್ ಪೇ ಬಳಕೆದಾರರಿಂದ 296 ದೂರುಗಳು ಬಂದಿವೆ.ಅ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.