Delhi, ಮಾರ್ಚ್ 26 -- ಭಾರತ ದೇಶಾದ್ಯಂತ ಮೊಬೈಲ್‌ ಆ್ಯಪ್‌ಗಳ ಮೂಲಕ ಯುಪಿಐ ವಹಿವಾಟು ನಡೆಯದೇ ಕೆಲ ಹೊತ್ತು ಅಡಚಣೆಯಾಯಿತು. ವಹಿವಾಟು ನಡೆಸುವವರ ಹಣ ವರ್ಗಾವಣೆಯಾಗದೆ ಏನಾಯಿತು ಎಂದು ನೋಡುವ ಸನ್ನಿವೇಶ ನಿರ್ಮಾಣವಾಗಿತ್ತು. ಕೆಲವೇ ಹೊತ್ತಿನಲ್ಲಿ ಸೇವೆಗಳು ಸಹಜ ಸ್ಥಿತಿಗೆ ಮರಳಿ ಜನ ನಿಟ್ಟುಸಿರು ಬಿಟ್ಟರು. ಈ ವೇಳೆ ವಹಿವಾಟುದಾರರೂ ಕೂಡ ಗೊಂದಲಕ್ಕೆ ಒಳಗಾಗಿದ್ದರು. ಎನ್‌ಸಿಪಿಐ ತಾಂತ್ರಿಕ ಸಮಸ್ಯೆಗಳನ್ನು ಎದುರಿಸಿತು. ಕೆಲವೇ ಕ್ಷಣಗಳಲ್ಲಿ ಉಂಟಾದ ಅಡಚಣೆ ದೇಶದ ಹಲವು ಭಾಗಗಳಲ್ಲಿ ಆಗಿದೆ. ಇದರಿಂದಾಗಿ ಯುಪಿಐ ಸೇವೆ ಭಾಗಶಃ ಕುಸಿಯಿತು. ಈ ಸಮಸ್ಯೆಯನ್ನು ತಾಂತ್ರಿಕ ತಂಡವನ್ನು ಪತ್ತೆ ಹಚ್ಚಿ ಪರಿಹರಿಸಲಾಗಿದೆ. ಜತೆಗೆ ವ್ಯವಸ್ಥೆ ಸ್ಥಿರಗೊಂಡಿದೆ. ಅನಾನುಕೂಲಕ್ಕಾಗಿ ಕ್ಷಮಿಸಿ ಎಂದು ಭಾರತೀಯ ರಾಷ್ಟ್ರೀಯ ಪಾವತಿಗಳ ನಿಗಮವು ಎಕ್ಸ್‌ನಲ್ಲಿ ಹೇಳಿದೆ.ಡೌನ್‌ ಡಿಟೆಕ್ಟರ್‌ ಪ್ರಕಾರ, ಸಂಜೆ 7.50 ರ ವೇಳೆಗೆ ಯುಪಿಐ ಸಮಸ್ಯೆಗೆ ಸಂಬಂಧಿಸಿದ 2,750 ದೂರುಗಳು ಬಂದಿವೆ. ವೆಬ್‌ಸೈಟ್ ಪ್ರಕಾರ ಗೂಗಲ್‌ ಪೇ ಬಳಕೆದಾರರಿಂದ 296 ದೂರುಗಳು ಬಂದಿವೆ.ಅ...