ಭಾರತ, ಏಪ್ರಿಲ್ 26 -- ಭದ್ರಾ ಅಭಯಾರಣ್ಯದಲ್ಲಿ ಆನೆ ಧಾಮ ಕಾಮಗಾರಿ ಇನ್ನು 2 ತಿಂಗಳಲ್ಲಿ ಶುರುವಾಗಲಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು, ಅವರು ಕಳೆದ ಡಿಸೆಂಬರದಲ್ಲಿ ಘೋಷಿಸಿದ್ದ ಯೋಜನೆ ಇದು. (ಸಾಂಕೇತಿಕ ಚಿತ್ರ)
ಹಾಸನ, ಕೊಡಗು ಹಾಗೂ ಚಿಕ್ಕಮಗಳೂರು ಭಾಗದಲ್ಲಿ ಕಾಡಾನೆಗಳ ಹಾವಳಿ ತಡೆಗೆ ಭದ್ರಾ ಅಭಯಾರಣ್ಯದಲ್ಲಿ ನಿರ್ಮಾಣ ಮಾಡುತ್ತಿರುವ 'ಆನೆ ಧಾಮ'ದ ಕಾಮಗಾರಿ ಇನ್ನು ಕೇವಲ ಎರಡು ತಿಂಗಳಲ್ಲಿ ಶುರುವಾಗಲಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಈಶ್ವರ ಖಂಡ್ರೆ, 53 ಕೋಟಿ ರೂಪಾಯಿ ವೆಚ್ಚದಲ್ಲಿ ಆನೆ ಧಾಮ ನಿರ್ಮಾಣ ಮಾಡುವುದಕ್ಕೆ ಸಮಗ್ರ ಯೋಜನಾ ವರದಿ ಸಿದ್ಧವಾಗುತ್ತಿದೆ ಎಂದು ತಿಳಿಸಿದರು.
ಭದ್ರಾ ಅಭಯಾರಣ್ಯದಲ್ಲಿ ಈಗಾಗಲೇ ಸ್ಥಳ ಪರಿಶೀಲನಾ ಕಾರ್ಯವೂ ಮುಗಿದಿದೆ. ಬಿದಿರು, ಹಲಸು, ಹುಲ್ಲು ಸೇರಿದಂತೆ ಆನೆಗಳ ನೆಚ್ಚಿನ ಆಹಾರವನ್ನು ಆನೆ ಧಾಮದಲ್ಲಿ ಬೆಳೆಸಲಾಗುತ್ತದೆ. ಜನವಸತಿ, ಕೃಷಿ ಭೂಮಿಯತ್ತ ಸಾಗುವ ಆನೆಗಳನ್ನು ಈ ಪ್ರದೇಶದಲ್ಲಿ ಬಿಡಲಾಗುತ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.