ಭಾರತ, ಮಾರ್ಚ್ 29 -- ಮಂಗಳೂರು: ಇವರಿಬ್ಬರು ಹಗಲಿನಲ್ಲಿ ಶಿಕ್ಷಕಿಯರು, ಸಂಜೆಯಾಗುತ್ತಿದ್ದಂತೆ ತರಗತಿಗಳಿಗೆ ಹಾಜರಾಗಿ, ಓದಿದರು. ಇದೀಗ ತಮ್ಮ ಮಾತೃಭಾಷೆಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಇಂದು (ಮಾರ್ಚ್ 29) ನಡೆದ ಘಟಿಕೋತ್ಸವದಲ್ಲಿ ಕೊಂಕಣಿ ಮತ್ತು ತುಳು ಭಾಷೆಯಲ್ಲಿ ಈ ಇಬ್ಬರು ಶಿಕ್ಷಕಿಯರು ಮೊದಲ ರ್ಯಾಂಕ್ ಪಡೆದುಕೊಂಡಿದ್ದಾರೆ. ಇವರಿಬ್ಬರೂ ಹಗಲು ಹೊತ್ತಿನಲ್ಲಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿಯಾರಾಗಿದ್ದರು. ಸಂಜೆ ಕಾಲೇಜಿನಲ್ಲಿ ಎಂಎ ವಿದ್ಯಾರ್ಥಿನಿಯರಾಗಿದ್ದರು.
ಮಂಗಳೂರಿನ ಕೂಳೂರಿನ ಜ್ಯೋತಿ ಪ್ರಿಯ ಮತ್ತು ಮಂಗಳೂರಿನ ಮಣ್ಣಗುಡ್ಡೆಯ ಅನಿತಾ ಶೆಣೈ ಈ ಸಾಧನೆ ಮಾಡಿದವರು. ಇವರಿಬ್ಬರು ತಮ್ಮ ಮಾತೃಭಾಷೆಯಲ್ಲಿಯೇ ಎಂಎ ಮಾಡಿದ್ದು ವಿಶೇಷ. ಜ್ಯೋತಿ ಪ್ರಿಯ ಅವರು ಈ ಮೊದಲು ಕನ್ನಡ ಎಂಎ ಮಾಡಿದ್ದರು. ಕನ್ನಡ ಎಂಎಯಲ್ಲಿಯೂ ಮೊದಲ ರಾಂಕ್ ಪಡೆದಿದ್ದ ಅವರು ಇದೀಗ ತುಳುಭಾಷೆಯಲ್ಲಿ ಎಂಎ ಮಾಡಿ ಮೊದಲ ರ್ಯಾಂಕ್ ಪಡೆದುಕೊಂಡಿದ್ದಾರೆ.
ಇವರು ಮೂಲತಃ ತುಳು ಭಾಷಿಕರು. ಮಂಗಳೂರಿನ ಕಾರ್ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.