ಭಾರತ, ಮಾರ್ಚ್ 29 -- ಮಂಗಳೂರು: ಇವರಿಬ್ಬರು ಹಗಲಿನಲ್ಲಿ ಶಿಕ್ಷಕಿಯರು, ಸಂಜೆಯಾಗುತ್ತಿದ್ದಂತೆ ತರಗತಿಗಳಿಗೆ ಹಾಜರಾಗಿ, ಓದಿದರು. ಇದೀಗ ತಮ್ಮ ಮಾತೃಭಾಷೆಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಇಂದು (ಮಾರ್ಚ್ 29) ನಡೆದ ಘಟಿಕೋತ್ಸವದಲ್ಲಿ ಕೊಂಕಣಿ ಮತ್ತು ತುಳು ಭಾಷೆಯಲ್ಲಿ ಈ ಇಬ್ಬರು ಶಿಕ್ಷಕಿಯರು ಮೊದಲ ರ‍್ಯಾಂಕ್‌ ಪಡೆದುಕೊಂಡಿದ್ದಾರೆ. ಇವರಿಬ್ಬರೂ ಹಗಲು ಹೊತ್ತಿನಲ್ಲಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿಯಾರಾಗಿದ್ದರು. ಸಂಜೆ ಕಾಲೇಜಿನಲ್ಲಿ ಎಂಎ ವಿದ್ಯಾರ್ಥಿನಿಯರಾಗಿದ್ದರು.

ಮಂಗಳೂರಿನ ಕೂಳೂರಿನ ಜ್ಯೋತಿ ಪ್ರಿಯ ಮತ್ತು ಮಂಗಳೂರಿನ ಮಣ್ಣಗುಡ್ಡೆಯ ಅನಿತಾ ಶೆಣೈ ಈ ಸಾಧನೆ ಮಾಡಿದವರು. ಇವರಿಬ್ಬರು ತಮ್ಮ ಮಾತೃಭಾಷೆಯಲ್ಲಿಯೇ ಎಂಎ ಮಾಡಿದ್ದು ವಿಶೇಷ. ಜ್ಯೋತಿ ಪ್ರಿಯ ಅವರು ಈ ಮೊದಲು ಕನ್ನಡ ಎಂಎ ಮಾಡಿದ್ದರು. ಕನ್ನಡ ಎಂಎಯಲ್ಲಿಯೂ ಮೊದಲ ರಾಂಕ್ ಪಡೆದಿದ್ದ ಅವರು ಇದೀಗ ತುಳುಭಾಷೆಯಲ್ಲಿ ಎಂಎ ಮಾಡಿ ಮೊದಲ ರ‍್ಯಾಂಕ್‌ ಪಡೆದುಕೊಂಡಿದ್ದಾರೆ.

ಇವರು ಮೂಲತಃ ತುಳು ಭಾಷಿಕರು. ಮಂಗಳೂರಿನ ಕಾರ್ ...