Bengaluru, ಮೇ 23 -- ಬೆಂಗಳೂರು ಮೆಟ್ರೊ ಪ್ರಯಾಣ ದರವನ್ನು ವಿಪರೀತ ಏರಿಕೆ ಮಾಡಿ ಪ್ರಯಾಣಿಕರಿಗೆ ಹೊರೆ ಹೊರಿಸಿದ್ದ ಬಿಎಂಆರ್ಸಿಎಲ್ ಈಗ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಇರುವ ಶೌಚಾಲಯಕ್ಕೆ ಬಳಕೆದಾರರ ಶುಲ್ಕ ವಿಧಿಸಲು ತೀರ್ಮಾನಿಸಿದ್ದು, ಆಯ್ದ 12 ನಿಲ್ದಾಣಗಳಲ್ಲಿ ಶುಲ್ಕ ಸಂಗ್ರಹ ಶುರುಮಾಡಿದೆ.
ಇತ್ತೀಚೆಗಷ್ಟೇ ನಮ್ಮ ಮೆಟ್ರೋ ಟಿಕೆಟ್ ದರವನ್ನು ಶೇಕಡ 100 ಏರಿಕೆ ಮಾಡಿ, ಪ್ರತಿರೋಧ ವ್ಯಕ್ತವಾದ ಬಳಿಕ ಅದನ್ನು ಶೇಕಡ 71ಕ್ಕೆ ಇಳಿಸಿದ್ದರು. ಮೆಟ್ರೋ ನಿಲ್ದಾಣಗಳಲ್ಲಿರುವ ಶೌಚಾಲಯವನ್ನು ಇದುವರೆಗೂ ಉಚಿತ ಬಳಕೆಗೆ ನೀಡಿದ್ದರು. ಈಗ ಏಕಾಕಿಯಾಗಿ ಅದಕ್ಕೂ ದರ ವಿಧಿಸಿದ್ದಾರೆ ಎಂದು ನಮ್ಮ ಮೆಟ್ರೋದ ನಿತ್ಯ ಪ್ರಯಾಣಿಕ ಬಸವರಾಜು ಅಸಮಾಧಾನ ತೋಡಿಕೊಂಡಿದ್ದಾರೆ.
ಖಾಸಗಿ ವಲಯದ ಉದ್ಯೋಗಿಗಳಿಗೆ ಈಗಿನ ಹಣದುಬ್ಬರಕ್ಕೆ ತಕ್ಕಂತೆ ವೇತನ ಹೆಚ್ಚಳವಾಗಲ್ಲ. ನಿತ್ಯೋಪಯೋಗಿ ವಸ್ತುಗಳ ಬೆಲೆ ಏರಿಕೆಯಾಗುತ್ತದೆ, ಪ್ರಯಾಣದರ, ಪೆಟ್ರೋಲ್, ಡೀಸೆಲ್ ದರ, ಶಾಲಾ ಶುಲ್ಕ, ಎಲ್ಲವೂ ಹೆಚ್ಚಳವಾಗುತ್ತದೆ. ಅದರ ಜತೆಗೆ ಈಗ ಮೆಟ್ರೋ ನಿಲ್ದಾಣಗಳ ಶೌಚಾಲಯ ಬ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.