ಭಾರತ, ಏಪ್ರಿಲ್ 10 -- Bengaluru Water Tariffs: ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇಂದಿನಿಂದ (ಏಪ್ರಿಲ್ 10) ಅಧಿಕೃತವಾಗಿ ನೀರಿನ ದರ ಏರಿಕೆಯಾಗಿದೆ. ಬೆಂಗಳೂರು ಜಲ ಮಂಡಳಿ ಅಧ್ಯಕ್ಷ ರಾಮ್ಪ್ರಸಾತ್ ಮನೋಹರ್ ಈ ವಿಚಾರವನ್ನು ಬುಧವಾರವೇ (ಏಪ್ರಿಲ್ 9) ಪ್ರಕಟಿಸಿದ್ದು, ಗೃಹ ಬಳಕೆ ನೀರಿಗೆ ಪ್ರತಿ ಲೀಟರ್ಗೆ 0.15 ಪೈಸೆಯಿಂದ 1 ಪೈಸೆವರೆಗೂ ಹೆಚ್ಚಳವಾಗಲಿದೆ. ಏಪ್ರಿಲ್ 10ರಿಂದಲೇ ಹೊಸ ದರ ಜಾರಿಯಾಗಲಿದೆ ಎಂದು ತಿಳಿಸಿದ್ದರು. ಬೆಂಗಳೂರು ಮಹಾನಗರದಲ್ಲಿ 11 ವರ್ಷಗಳ ಬಳಿಕ ನೀರಿ ದರ ಏರಿಕೆಯಾಗಿದೆ. ಸ್ವಾಯತ್ತ ಸಂಸ್ಥೆಯಾಗಿರುವ ಬೆಂಗಳೂರು ಜಲಮಂಡಳಿಗೆ ಸರ್ಕಾರದಿಂದ ಹಣಕಾಸಿನ ನೆರವು ಸಿಗುವುದಿಲ್ಲ. ಕುಡಿಯುವ ನೀರಿಗೆ ವಿಧಿಸುವ ಶುಲ್ಕವೇ ಪ್ರಮುಖ ಆದಾಯವಾಗಿದೆ. ದಶಕದಲ್ಲಿ ವಿದ್ಯುತ್ ವೆಚ್ಚವು ಶೇಕಡ 107 ರಷ್ಟು ಹೆಚ್ಚಾಗಿದೆ ಎಂಬುದರ ಕಡೆಗೆ ರಾಮ್ ಪ್ರಸಾತ್ ಮನೋಹರ್ ಗಮನಸೆಳೆದಿದ್ದರು.
ಬೆಂಗಳೂರು ಜಲ ಮಂಡಳಿಗೆ ಈಗ ಪ್ರತಿ ತಿಂಗಳು 200 ಕೋಟಿ ರೂ ವೆಚ್ಚವಿದೆ. ಸಂಗ್ರಹವಾಗುತ್ತಿರುವುದು 120 ಕೋಟಿ ರೂಪಾಯಿ ಮಾತ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.