Bengaluru, ಮಾರ್ಚ್ 28 -- ಬೆಂಗಳೂರು: ಬೇಸಿಗೆ ಬಂದಾಗೆಲ್ಲ ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರಿನ ಕೊರತೆ ಸರ್ವೇ ಸಾಮಾನ್ಯ. ಹೊಸದಾಗಿ ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಯಾದ ಪ್ರದೇಶಗಳಲ್ಲಿ ನೀರು ಸೇರಿ ಕೆಲವು ಮೂಲಸೌಕರ್ಯಗಳ ಕೊರತೆ ಕಾಡುತ್ತಲೇ ಇದೆ. ಹೀಗಾಗಿ ಬೆಂಗಳೂರು ವ್ಯಾಪ್ತಿಯಲ್ಲಿ ಕಟ್ಟಡಗಳ ವಿಶೇಷವಾಗಿ ಮನೆಗಳ ಸುತ್ತ, ಖಾಲಿ ಜಾಗಕ್ಕೆ ಸಿಮೆಂಟಿಂಗ್ ಅಥವಾ ಕಾಂಕ್ರೀಟ್ ಮಾಡುವುದನ್ನು ನಿಷೇಧಿಸಲು ಕರ್ನಾಟಕ ಸರ್ಕಾರ ಚಿಂತನೆ ನಡೆಸಿದೆ. ಮಳೆ ನೀರು ಕೊಯ್ಲು ಮತ್ತು ಮಣ್ಣಿಗೆ ಬಿದ್ದ ನೀರು ಭೂಮಿ ಸೇರುವುದಕ್ಕೆ ಅನುಕೂಲವಾಗುವಂತೆ ಈ ಪ್ರದೇಶವನ್ನು ಬಳಸಬೇಕು ಎಂಬುದು ಈ ಕ್ರಮದ ಉದ್ದೇಶ ಎಂದು ಟೈಮ್ಸ್ ಆಫ್ ಇಂಡಿಯಾ ಗುರುವಾರ (ಮಾರ್ಚ್ 27) ವರದಿ ಮಾಡಿದೆ.
ಪಟ್ಟಣ ಯೋಜನಾ ಪರಿಭಾಷೆಯಲ್ಲಿ "ಸೆಟ್ಬ್ಯಾಕ್ ಏರಿಯಾ" ಮನೆ ಅಥವಾ ಕಟ್ಟಡ ಕಟ್ಟುವಾಗ ಸುತ್ತಲೂ ಬಿಟ್ಟಿರುವ ಖಾಲಿ ಜಾಗ. ಇದು ಒಂದು ಕಟ್ಟಡ ಅಥವಾ ರಚನೆಯನ್ನು ಆಸ್ತಿಯ ಗಡಿ ರೇಖೆ, ರಸ್ತೆ ಅಥವಾ ಗೊತ್ತುಪಡಿಸಿದ ಪ್ರದೇಶದಿಂದ ಇರಬೇಕಾದ ಕನಿಷ್ಠ ಅಂ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.