Bengaluru, ಮೇ 8 -- ಬೆಂಗಳೂರು: ಉದ್ಯಾನ ನಗರ ಬೆಂಗಳೂರಿನ ಪ್ರಸಿದ್ದ ಉದ್ಯಾನವನ ಕಬ್ಬನ್ ಪಾರ್ಕ್. ಈ ಉದ್ಯಾನವನದಲ್ಲಿ ಅನೇಕ ಚಟುವಟಿಕೆಗಳು ನಡೆಯುತ್ತಲೇ ಇರುತ್ತವೆ. ವಾಕಿಂಗ್, ವಾಯು ವಿಹಾರದ ಜತೆಗೆ ಸಭೆ, ಚರ್ಚೆಗಳೂ ನಡೆಯುವುದುಂಟು. ಒಮ್ಮೊಮ್ಮೆ ಇಂತಹ ಚಟುವಟಿಕೆಗಳು ಅತಿರೇಕಕ್ಕೆ ಹೋಗುವುದೂ ಉಂಟು. ಅಕ್ರಮ ಚಟುವಟಿಕೆಗಳೂ ನಡೆಯುತ್ತಿರುತ್ತವೆ. ಈ ನಿಟ್ಟಿನಲ್ಲಿ ಇತ್ತೀಚೆಗೆ ರಾಜ್ಯ ಸರ್ಕಾರ ಕಬ್ಬನ್ ಪಾರ್ಕ್ ಒಳಗೆ ಏನು ಮಾಡಬೇಕು ಏನು ಮಾಡಬಾರದು ಎಂದು ಸೂಚನೆಗಳನ್ನು ಹೊರಡಿಸಿದೆ. ಕಬ್ಬನ್ ಪಾರ್ಕ್ ನಲ್ಲಿ ವಾಕಥಾನ್, ಮ್ಯಾರಥಾನ್, ಸರ್ಕಾರದ ಇಲಾಖೆಗಳಿಂದ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳು, ನೊಂದಾಯಿತ ಸಂಸ್ಥೆಗಳಿಂದ ಆರೋಗ್ಯ ತಪಾಸಣೆ ನಡೆಸಲು ಅವಕಾಶ ಮಾಡಿಕೊಡಲಾಗಿದೆ. ಮುಂಜಾನೆ 5.30 ರಿಂದ 9 ಗಂಟೆಯವರೆಗೆ ಮತ್ತು ಸಂಜೆ 4.30 ರಿಂದ 6 ಗಂಟೆಯವರೆಗೆ ವಾಯುವಿಹಾರ ನಡೆಸಬಹುದಾಗಿದೆ.
ಕೆಲವೊಮ್ಮೆ ಇಲ್ಲಿ ಮೀಟಿಂಗ್ ಗಳೂ ನಡೆಯುವುದುಂಟು. ಓದುಗರು, ಬರಹಗಾರರು, ಕಲಾವಿದರು ಸಭೆ ನಡೆಸುವುದಾದರೆ 20 ಮಂ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.