ಭಾರತ, ಮಾರ್ಚ್ 29 -- ಬೆಂಗಳೂರು: ಯುಗಾದಿ ಹಬ್ಬಕ್ಕೆ ಬೆಂಗಳೂರಿಗರು ಸಜ್ಜಾಗುತ್ತಿರುವ ಹೊತ್ತು ಇದು. ಹೂವು, ಹಣ್ಣು ಹಂಪಲುಗಳ ದರ ಗಗನಮುಖಿಯಾಗಿದೆ. ಹಬ್ಬದ ಹೊತ್ತಲ್ಲಿ ಇವುಗಳ ಬೇಡಿಕೆ ಹೆಚ್ಚಾಗುತ್ತಿರುವ ಕಾರಣ ಅದಕ್ಕೆ ಬೇಕಾದಷ್ಟು ಪೂರೈಕೆ ಇರಲ್ಲ. ಹೀಗಾಗಿ ದರ ಏರಿಕೆಯಾಗುವುದು ಸಹಜ. ಇನ್ನೊಂದೆಡೆ, ತರಕಾರಿ ದರ ಬಹುತೇಕ ಸ್ಥಿರವಾಗಿರುವುದು ಗ್ರಾಹಕರು ತುಸು ಸಮಾಧಾನ ಪಡುವಂತೆ ಮಾಡಿದೆ. ಯುಗಾದಿ ಹಬ್ಬಕ್ಕೆ ವಾರ ಮೊದಲೇ ತಯಾರಿ ನಡೆಯತೊಡಗಿದ್ದು, ಅನೇಕರು ದರ ಏರಿಕೆ ಆತಂಕದ ಕಾರಣ ಮುಂಚಿತವಾಗಿಯೇ ಹಣ್ಣು ಹಂಪಲು ಖರೀದಿಸಿ ಇಟ್ಟುಕೊಳ್ಳುತ್ತಿರುವುದು ಮಾರುಕಟ್ಟೆಯಲ್ಲಿ ಕಂಡುಬಂತು. ಇನ್ನು ಕೆಲವರು ಹೂವುಗಳನ್ನೂ ಖರೀದಿಸಿ ಕೊಂಡೊಯ್ದು ಕೆಡದಂತೆ ಇಟ್ಟುಕೊಳ್ಳಲು ಸೂಕ್ತ ವ್ಯವಸ್ಥೆ ಮಾಡುತ್ತಿರುವುದಾಗಿ ಹೇಳುತ್ತಿದ್ದುದು ಗಮನಸೆಳೆಯಿತು.
ಒಂದು ಕಿಲೋ ಸೇವಂತಿಗೆ ಹೂವು ಶುಕ್ರವಾರ ಸಂಜೆ 200 ರೂಪಾಯಿಗೆ ಮಾರಾಟ ಆಗುತ್ತಿತ್ತು. ಇಂದು 250 ರೂಪಾಯಿ ಆಸುಪಾಸು ತಲುಪಿದೆ. ಬಟನ್ ರೋಸ್ ಕಿಲೋಗೆ 250 ರೂಪಾಯಿಯಿಂದ 300 ರೂಪಾಯಿ, ಕನಕಾಂಬರ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.