ಭಾರತ, ಮೇ 23 -- ಬೆಂಗಳೂರು: ಆನೇಕಲ್ ತಾಲೂಕು ಹಳೆ ಚಂದಾಪುರದ ರೈಲ್ವೆ ಸೇತುವೆ ಬಳಿ ಬುಧವಾರ (ಮೇ 21) ಅನಾಥವಾಗಿ ಬಿದ್ದಿದ್ದ ಸೂಟ್ಕೇಸ್ನಲ್ಲಿ ಸುಮಾರು 18 ವರ್ಷದ ಯುವತಿಯ ಶವ ಪತ್ತೆಯಾಗಿದೆ ಎಂದು ಸೂರ್ಯಸಿಟಿ ಪೊಲೀಸ್ ಠಾಣೆ ಮೂಲಗಳು ತಿಳಿಸಿವೆ. ಯುವತಿಯನ್ನು ಹತ್ಯೆ ಮಾಡಿ ಕೈಕಾಲು ಮಡಚಿ ಸೂಟ್ಕೇಸ್ನಲ್ಲಿ ತುಂಬಲಾಗಿದ್ದು, ಕಿವಿ ಮತ್ತು ಮೂಗಿನಲ್ಲಿ ರಕ್ತಸ್ರಾವವಾಗಿರುವ ಕುರುಹುಗಳಿವೆ. ಯುವತಿಯನ್ನು ಬೇರೆ ಎಲ್ಲೋ ಕೊಲೆ ಮಾಡಲಾಗಿದೆ. ಸೂಟ್ಕೇಸ್ನಲ್ಲಿ ಶವವನ್ನು ತುಂಬಿ ರೈಲಿನ ಮೂಲಕ ತಂದು ಇಲ್ಲಿ ಎಸೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ರೈಲು ಸಂಚರಿಸುವಾಗ ಕತ್ತಲಲ್ಲಿ ಸೇತುವೆ ನೋಡಿ ಸಣ್ಣ ಹಳ್ಳ ಇರಬಹುದು ಎಂದು ಭಾವಿಸಿ ಅಪರಾಧಿಗಳು ಈ ಸೂಟ್ಕೇಸ್ ಅನ್ನು ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ.
ರೈಲ್ವೆ ಸೇತುವೆಯಿಂದ ಕೆಳಗೆ ರಸ್ತೆ ಬದಿ ಅನಾಥವಾಗಿ ಬಿದ್ದಿದ್ದ ನೀಲಿ ಬಣ್ಣದ ಸೂಟ್ಕೇಸ್ ಒಳಗಿಂದ ಯುವತಿಯ ದೇಹ, ಬಟ್ಟೆ ಕಂಡ ದಾರಿಹೋಕರು ಸೂರ್ಯಸಿಟಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಬೈಯಪ್ಪನಹಳ್ಳಿ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.