ಭಾರತ, ಮೇ 7 -- ಮೇ 24ರಂದು ಬೆಂಗಳೂರಿನ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಜರುಗಲಿರುವ 2 ಬಾರಿ ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ ಕ್ಲಾಸಿಕ್ ಜಾವೆಲಿನ್ ಸ್ಪರ್ಧೆಯ ಟಿಕೆಟ್ ದರಗಳನ್ನು ಪ್ರಕಟಿಸಲಾಗಿದೆ. ಇದು ಮೊದಲ ಬಾರಿಗೆ ಭಾರತದಲ್ಲಿ ನಡೆಯುವ ಅಂತಾರಾಷ್ಟ್ರೀಯ ಜಾವೆಲಿನ್ ಕ್ರೀಡಾಕೂಟ. ವಿಶೇಷ ಏನೆಂದರೆ ಈ ಜಾಗತಿಕ ಸ್ಪರ್ಧೆಗೆ ನೀರಜ್ ಚೋಪ್ರಾ ಅವರ ಹೆಸರನ್ನೇ ಇಡಲಾಗಿದೆ. ಈ ಕೂಟಕ್ಕೆ ಟಿಕೆಟ್ ದರವು ಕನಿಷ್ಠ 199 ರಿಂದ ಹಿಡಿದು 10,000 ತನಕ ನಿಗದಿಯಾಗಿದೆ.
ಭಾರತೀಯ ಅಭಿಮಾನಿಗಳಿಗೆ ತಮ್ಮ ಒಲಿಂಪಿಕ್ ಗೋಲ್ಡ್ ಮೆಡಲಿಸ್ಟ್ ಆಟವನ್ನು ನೇರವಾಗಿ ವೀಕ್ಷಿಸಲು ಒಂದು ವಿಶಿಷ್ಟ ಅವಕಾಶ ಸಿಗಲಿದೆ. ಈ ಕಾರ್ಯಕ್ರಮವನ್ನು ಮೂಲತಃ ಚೋಪ್ರಾ ಅವರ ತವರು ರಾಜ್ಯ ಹರಿಯಾಣದ ಪಂಚಕುಲದ ತೌ ದೇವಿ ಲಾಲ್ ಕ್ರೀಡಾಂಗಣದಲ್ಲಿ ನಿಗದಿಪಡಿಸಲಾಗಿತ್ತು. ಆದರೆ ಫ್ಲಡ್ಲೈಟ್ ಸಮಸ್ಯೆಯಿಂದಾಗಿ ಅದನ್ನು ಬೆಂಗಳೂರಿಗೆ ಸ್ಥಳಾಂತರ ಮಾಡಲಾಗಿದೆ. ಅಭಿಮಾನಿಗಳನ್ನ ಸೆಳೆಯುವ ಸಲುವಾಗಿ ಆಯೋಜಕರು ಎಸೆತಗಾರನ ರನ್ವೇ ಪಕ್ಕದಲ್ಲೇ ವಿಶೇಷ ಸ್ಟ್ಯಾಂಡ್ ನಿರ್ಮಿಸಿದ್ದಾ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.