ಭಾರತ, ಏಪ್ರಿಲ್ 5 -- Book Brahma: ಕಥೆಗಾರರು, ಕಾದಂಬರಿಗಾರರಿಗೆ ಖುಷಿ ಕೊಡುವ ಸುದ್ದಿ ಇದು. ಪ್ರಮುಖ ಪ್ರಕಾಶನ ಸಂಸ್ಥೆಯಾದ ಬುಕ್ ಬ್ರಹ್ಮ 2025ನೇ ಸಾಲಿನ 'ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ'ಗೆ ಕಥೆಗಳನ್ನು ಹಾಗೂ 'ಕಾದಂಬರಿ ಪುರಸ್ಕಾರ'ಕ್ಕೆ ಕಾದಂಬರಿಗಳನ್ನು ಆಹ್ವಾನಿಸಿದೆ.
ಬುಕ್ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಾದಂಬರಿ ಪುರಸ್ಕಾರಕ್ಕೆ 2024ರಲ್ಲಿ ಪ್ರಕಟಗೊಂಡ ಕಾದಂಬರಿಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುತ್ತದೆ. ಈ ಪುರಸ್ಕಾರವು 1 ಲಕ್ಷ ರೂಪಾಯಿ ನಗದು ಒಳಗೊಂಡಿದೆ. ಈ ಮೊತ್ತದಲ್ಲಿ ಲೇಖಕರಿಗೆ 75,000 ರೂಪಾಯಿ ಹಾಗೂ ಪ್ರಕಾಶಕರಿಗೆ 25,000 ರೂಪಾಯಿ ನೀಡಲಾಗುತ್ತದೆ. ಮೆಚ್ಚುಗೆ ಪಡೆಯುವ ನಾಲ್ಕು ಕಾದಂಬರಿಗಳಿಗೆ ತಲಾ 5,000 ರೂಪಾಯಿ ನೀಡಲಾಗುವುದು ಎಂದು ಬುಕ್ ಬ್ರಹ್ಮ ಸಂಸ್ಥೆ ತಿಳಿಸಿದೆ.
ಬುಕ್ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆಗೆ ಅಪ್ರಕಟಿತ ಕಥೆಗಳನ್ನು ಪರಿಗಣಿಸಲಾಗುತ್ತದೆ. ಪ್ರಥಮ ಸ್ಥಾನ ಪಡೆದ ಕಥೆಗೆ 50,000 ರೂಪಾಯಿ, ದ್ವಿತೀಯ ಸ್ಥಾನ ಪಡೆದ ಕಥೆಗೆ 25,000 ರೂಪಾಯಿ, ತೃತೀಯ ಸ್ಥಾನ ಪಡೆದ ಕಥೆಗ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.