ಭಾರತ, ಏಪ್ರಿಲ್ 6 -- Oviya Smoking Video: ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಹೇಳಿಕೆಗಳ ಮೂಲಕವೇ ಸಾಕಷ್ಟು ಚರ್ಚೆಯಲ್ಲಿರುತ್ತಾರೆ ಬಹುಭಾಷಾ ನಟಿ ಓವಿಯಾ. ವೇಶ್ಯಾವಾಟಿಕೆ ಮತ್ತು ಲೈಂಗಿಕ ಶಿಕ್ಷಣದ ಬಗ್ಗೆ ಮುಕ್ತವಾಗಿಯೇ ಮಾತನಾಡಿದ್ದ ಈ ನಟಿ, ನನಗೆ ಗಂಡನ ಅವಶ್ಯಕತೆ ಇಲ್ಲ ಎಂದೂ ನೇರವಾಗಿಯೇ ಹೇಳಿದ್ದರು. ನಾನು ಮದುವೆ ಆಗದೇ ಇರುವುದಕ್ಕೆ ನನ್ನನ್ನು ಕೆಲವರು ಸಲಿಂಗಕಾಮಿ ಎಂದು ತಿಳಿದಿದ್ದಾರೆ. ನಾನು ಲೆಸ್ಬಿಯನ್‌ ಅಲ್ಲ ಎಂದೂ ಕೇಳಿಕೆ ನೀಡಿದ್ದರು. ಈ ಹೇಳಿಕೆಗಳು ಒಂದು ಕಡೆಯಾದರೆ, ಕಳೆದ ವರ್ಷವಷ್ಟೇ ಓವಿಯಾ ಅವರದ್ದು ಎನ್ನಲಾದ ಖಾಸಗಿ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ಲೀಕ್‌ ಆಗಿತ್ತು. ನೋಡಿ ಆನಂದಿಸಿ ಎಂದೂ ಸ್ಪಷ್ಟನೆ ನೀಡಿದ್ದರು. ಸಿನಿಮಾಗಳನ್ನು ಹೊರತುಪಡಿಸಿ, ತಮ್ಮ ವೈಯಕ್ತಿಕ ವಿಚಾರಗಳಿಂದಲೂ ಈ ನಟಿ ಸುದ್ದಿಯಲ್ಲಿರುತ್ತಾರೆ. ಇದೀಗ ಬೀಚ್‌ನಲ್ಲಿ ಸಿಗರೇಟ್‌ ಸೇದುತ್ತ ಸುತ್ತಾಡಿದ್ದಾರೆ.

ಬಹುಭಾಷಾ ನಟಿ ಓವಿಯಾ ಹೆಲೆನ್‌ ಒಂದೇ ಭಾಷೆಗೆ ಸೀಮಿತವಾಗದೆ ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡದ ಹಲವು ಸಿನಿಮಾಗಳಲ್...