ಭಾರತ, ಮಾರ್ಚ್ 25 -- ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಪುರುಷರ ಆಟಗಾರರಿಗೆ ಕೇಂದ್ರ ಒಪ್ಪಂದಗಳನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಆದರೆ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಅವರು ಟಿ20ಐ ಕ್ರಿಕೆಟ್ನಿಂದ ನಿವೃತ್ತರಾದ ಕಾರಣ ವಾರ್ಷಿಕ ಒಪ್ಪಂದದಲ್ಲಿ ದೊಡ್ಡ ಬದಲಾವಣೆಯಾಗುವ ಸಾಧ್ಯತೆ ಇದೆ. ಕೊಹ್ಲಿ ಮತ್ತು ರೋಹಿತ್ ಎ-ಪ್ಲಸ್ ದರ್ಜೆಯನ್ನು ಕಳೆದುಕೊಳ್ಳಬಹುದು ಎನ್ನಲಾಗಿದೆ.
ಮಾರ್ಚ್ 24ರ ಸೋಮವಾರ ಎ, ಬಿ, ಸಿ ದರ್ಜೆಯಲ್ಲಿ 16 ಮಹಿಳಾ ಆಟಗಾರ್ತಿಯರಿರುವ ಕೇಂದ್ರ ಗುತ್ತಿಗೆ ಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ. ಶೀಘ್ರದಲ್ಲೇ ಪುರುಷರ ವಾರ್ಷಿಕ ಪಟ್ಟಿ ಪ್ರಕಟವಾಗುವ ಸಾಧ್ಯತೆ ಇದೆ. ಕಳೆದ ಬಾರಿ ಪುರುಷರ ಪಟ್ಟಿಯಲ್ಲಿ 30 ಹೆಸರುಗಳಿದ್ದವು. ಆದರೆ ಈ ಪಟ್ಟಿಯಲ್ಲಿ ಕೆಲವು ಹೆಸರು ಮಾಯವಾಗಬಹುದು, ಅದೇ ರೀತಿ ಕೆಲವು ಹೆಸರು ಪಟ್ಟಿಯಲ್ಲಿ ಅವಕಾಶ ಪಡೆದುಕೊಳ್ಳುವ ನಿರೀಕ್ಷೆಯೂ ಇದೆ.
ರಾಷ್ಟ್ರೀಯ ಆಯ್ಕೆ ಸಮಿತಿಯು ಮುಖ್ಯ ಕೋಚ್ ಮತ್ತು ಕಾರ್ಯದರ್ಶಿ (ದೇವಜಿತ್ ಸೈಕಿಯಾ) ಅವರೊಂದಿಗೆ ಸಮಾಲೋಚ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.