ಭಾರತ, ಮಾರ್ಚ್ 25 -- ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಪುರುಷರ ಆಟಗಾರರಿಗೆ ಕೇಂದ್ರ ಒಪ್ಪಂದಗಳನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಆದರೆ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಅವರು ಟಿ20ಐ ಕ್ರಿಕೆಟ್​​ನಿಂದ ನಿವೃತ್ತರಾದ ಕಾರಣ ವಾರ್ಷಿಕ ಒಪ್ಪಂದದಲ್ಲಿ ದೊಡ್ಡ ಬದಲಾವಣೆಯಾಗುವ ಸಾಧ್ಯತೆ ಇದೆ. ಕೊಹ್ಲಿ ಮತ್ತು ರೋಹಿತ್​ ಎ-ಪ್ಲಸ್ ದರ್ಜೆಯನ್ನು ಕಳೆದುಕೊಳ್ಳಬಹುದು ಎನ್ನಲಾಗಿದೆ.

ಮಾರ್ಚ್​​ 24ರ ಸೋಮವಾರ ಎ, ಬಿ, ಸಿ ದರ್ಜೆಯಲ್ಲಿ 16 ಮಹಿಳಾ ಆಟಗಾರ್ತಿಯರಿರುವ ಕೇಂದ್ರ ಗುತ್ತಿಗೆ ಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ. ಶೀಘ್ರದಲ್ಲೇ ಪುರುಷರ ವಾರ್ಷಿಕ ಪಟ್ಟಿ ಪ್ರಕಟವಾಗುವ ಸಾಧ್ಯತೆ ಇದೆ. ಕಳೆದ ಬಾರಿ ಪುರುಷರ ಪಟ್ಟಿಯಲ್ಲಿ 30 ಹೆಸರುಗಳಿದ್ದವು. ಆದರೆ ಈ ಪಟ್ಟಿಯಲ್ಲಿ ಕೆಲವು ಹೆಸರು ಮಾಯವಾಗಬಹುದು, ಅದೇ ರೀತಿ ಕೆಲವು ಹೆಸರು ಪಟ್ಟಿಯಲ್ಲಿ ಅವಕಾಶ ಪಡೆದುಕೊಳ್ಳುವ ನಿರೀಕ್ಷೆಯೂ ಇದೆ.

ರಾಷ್ಟ್ರೀಯ ಆಯ್ಕೆ ಸಮಿತಿಯು ಮುಖ್ಯ ಕೋಚ್ ಮತ್ತು ಕಾರ್ಯದರ್ಶಿ (ದೇವಜಿತ್ ಸೈಕಿಯಾ) ಅವರೊಂದಿಗೆ ಸಮಾಲೋಚ...