Bengaluru, ಮಾರ್ಚ್ 13 -- ಊಟಕ್ಕೆ ಗರಿಗರಿಯಾದ ಹಪ್ಪಳ ತಿನ್ನಲು ಇಷ್ಟಪಡುತ್ತಿದ್ದರೆ, ದಿಢೀರನೆ ಹಪ್ಪಳ ಪಾಕವಿಧಾನವನ್ನು ಪ್ರಯತ್ನಿಸಬಹುದು. ಇನ್ಸ್ಟಾಂಟ್ ಅಥವಾ ತ್ವರಿತವಾಗಿ ತಯಾರಿಸಬಹುದಾದ ಈ ಹಪ್ಪಳ ಪಾಕವಿಧಾನ ತುಂಬಾ ಸರಳ. ಹೋಳಿ ಹಬ್ಬಕ್ಕೆ ಅತಿಥಿಗಳಿಗೆ ಊಟ ಬಡಿಸಲು ಸೈಡ್ ಡಿಶ್ ಅನ್ನು ತಪ್ಪಿಸಿಕೊಳ್ಳಬಾರದು. ಈ ಆರೋಗ್ಯಕರ ಖಾದ್ಯವು ಮಕ್ಕಳು ತಿನ್ನುವ ಅನಾರೋಗ್ಯಕರ ಚಿಪ್ಸ್‌ಗಳನ್ನು ಸುಲಭವಾಗಿ ಬದಲಾಯಿಸಬಹುದು. ಬಿಸಿಲಿನಲ್ಲಿ ಒಣಗಿಸುವ ಅಗತ್ಯವಿಲ್ಲದೆ ದಿಢೀರನೆ ಹಪ್ಪಳ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಬೇಕಾಗುವ ಸಾಮಗ್ರಿಗಳು: 1/2 ಕಪ್ ಸಟ್ಟು ಹಿಟ್ಟು (ಕಡಲೆಕಾಳಿನ ಹಿಟ್ಟು), 1 ಕಪ್ ಸಂಸ್ಕರಿಸಿದ ಎಣ್ಣೆ, 1/2 ಚಮಚ ಉಪ್ಪು, 1/4 ಚಮಚ ಶುಂಠಿ ಪೇಸ್ಟ್, 1 ಚಿಟಿಕೆ ಅರಿಶಿನ, 1/2 ಚಮಚ ಮೆಣಸಿನ ಪುಡಿ , 1/4 ಚಮಚ ಓಂಕಾಳು, 1/4 ಕಪ್ ಕಡಲೆ ಹಿಟ್ಟು, 1/4 ಚಮಚ ಬೆಳ್ಳುಳ್ಳಿ ಪೇಸ್ಟ್ .

ತಯಾರಿಸುವ ವಿಧಾನ: ಹಪ್ಪಳ ಅಥವಾ ಪಾಪಡ್ ತಯಾರಿಸಲು ಸಾಮಾನ್ಯವಾಗಿ ಮೂರ್ನಾಲ್ಕು ದಿನಗಳಾದ್ರೂ ಬೇಕಾಗುತ್ತದೆ....