Bengaluru, ಮೇ 18 -- ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿದೆ. ಜಿಬಿಎ ಬೆಂಗಳೂರಿಗೆ ಹೊಸ ದಿಕ್ಕುದೆಸೆ ತೋರಲಿದೆ ಎಂದು ನಿರೀಕ್ಷಿಸಲಾಗಿದೆ. ಸಮಸ್ಯೆಗಳಿಗೆ ಮುಕ್ತಿ ಸಿಗಲಿದ್ದು ಹಲವು ಪಾಲಿಕೆಗಳು ರಚನೆಯಾಗಿ ಅಧಿಕಾರ ವಿಕೇಂದ್ರೀಕರಣವಾಗಿ ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ ಎಂದು ಭಾವಿಸಲಾಗಿದೆ. ಬಿಬಿಎಂಪಿಯಿಂದ ಜಿಬಿಎವರೆಗಿನ ಹಾದಿ ಹೇಗಿತ್ತು ನೋಡೋಣ.
2007 ರಲ್ಲಿ ಅಸ್ತಿತ್ವಕ್ಕೆ ಬಂದ ಬಿಬಿಎಂಪಿ ಎಗ್ಗಿಲ್ಲದೆ ಬೆಳೆಯುತ್ತಿರುವ ನಗರದ ನಿರ್ವಹಣೆಗೆ ಹರಸಾಹಸ ಪಡುತ್ತಿತು. ಪಾಲಿಕೆ ವ್ಯಾಪ್ತಿ 709 ಚ.ಕಿಮೀಗೆ ಹಿಗ್ಗಿದ್ದು, 1 ಕೋಟಿಗೂ ಹೆಚ್ಚು ನಿವಾಸಿಗಳಿದ್ದಾರೆ. ಈ ಬೃಹತ್ ಗಾತ್ರದ ನಗರವನ್ನು ನಿಬಾಯಿಸುತ್ತಿದ್ದ ಬಿಬಿಎಂಪಿ ಮೆಚ್ಚುಗೆಗಿಂತ ಟೀಕೆಗೊಳಗಾಗಿದ್ದೇ ಹೆಚ್ಚು. ವಿವಿಧ ಇಲಾಖೆಗಳ ನಡುವೆ ಸಮನ್ವಯ ಇಲ್ಲದೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗುತ್ತಿರಲಿಲ್ಲ. ಸಂಚಾರ ದಟ್ಟಣೆ, ಪ್ರವಾಹ, ಗುಂಡಿ ಬಿದ್ದ ರಸ್ತೆಗಳು, ಕಸ ಸಂಗ್ರಹ, ನೀರಿನ ಕೊರತೆಯ ಸಮಸ್ಯೆಗಳಿಗೆ ಪರಿಹಾರವೇ ಇಲ್ಲ ಎಂಬ ಹಂತ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.